×
Ad

ಸಕಲೇಶಪುರ: ಗ್ರಾಮದಲ್ಲಿ ಸೌಹಾರ್ದ ವಾತವಾರಣವನ್ನು ಸೃಷ್ಟಿಸಿದ ಮಸೀದಿಯ ದರ್ಶನ ಕಾರ್ಯಕ್ರಮ

Update: 2022-03-15 20:18 IST

ಸಕಲೇಶಪುರ: ಮಸೀದಿಯ ದರ್ಶನ ಕಾರ್ಯಕ್ರಮವು  ಗ್ರಾಮದಲ್ಲಿ ಸೌಹಾರ್ದ ವಾತವಾರಣವನ್ನು ಸೃಷ್ಟಿಸಿತು, ಸರ್ವಧರ್ಮದ, ಸರ್ವ ಪಕ್ಷದ ಹಿರಿಯರು, ಕಿರಿಯರು, ಮಹಿಳೆಯರು, ಪುರುಷರು, ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಸೌಹಾರ್ದ ಹಬ್ಬಕ್ಕೆ ಸಾಕ್ಷಿಯಾದರು.

ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದ ಬಿ.ಎಂ.ರಸ್ತೆ, ಇಂದಿರಾನಗರದಲ್ಲಿರುವ ಪುನರ್ ನಿರ್ಮಾಣಗೊಂಡ ಜುಮ್ಮ ಮಸೀದಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಮಸೀದಿ ಆಡಳಿತ ಸಮಿತಿ ಮಸೀದಿ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿತ್ತು, ಯಾವುದೇ ಧಾರ್ಮಿಕ ಸ್ಥಳಗಳು ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಎಲ್ಲರಿಗೂ ಧರ್ಮಿಯರಿಗೆ  ಶ್ರದ್ದಾಕೇಂದ್ರವಾಗಿರಬೇಕು ಎಂದು ತುಮಕೂರಿನ ಹಜರತ್ ಮೌಲಾನ ಖಾಲಿದ್ ಬೇಗ್ ನದ್ವಿ ಸಾಹೇಬ್ ಹೇಳಿದರು.

ಇಂದು ಎಲ್ಲ ಸಮುದಾಯದವರ ಮುಂದೆ ಮಾತನಾಡುತ್ತಿರುವುದು ಸಂತೋಷದ ವಿಚಾರವಾಗಿದೆ.ಈ ಭೂಮಿಯ ಮೇಲೆ ನಾವು ನಿವೆಲ್ಲರೂ ನೂರಾರು ವರ್ಷಗಳಿಂದ ಜೀವಿಸುತ್ತಿದ್ದೇವೆ  ಆದರೆ ಕೆಲವರಿಗೆ ಮಸೀದಿಯೊಳಗೆ ಏನಿದೆ,ಮುಂಜಾನೆ ನಮಾಜ್ ಕೂಗುವ ಉದ್ದೇಶ ಎನೆಂಬುವುದು ತಿಳಿಯದೆ ಕೆಲವರಲ್ಲಿ ತಪ್ಪು ಮಾಹಿತಿಗಳಿವೆ .ನಾನು ಕುರಾನ್, ಬೈಬಲ್ ವೇದ ಹಾಗೂ ಗೀತೆಗಳನ್ನು ಅಧ್ಯಾಯನ ಮಾಡಿದ್ದೇನೆ.ಎಲ್ಲ ಧರ್ಮದ ಮಾತುಗಳು ಒಂದೇ ಅಗಿದೆ.ಇಡೀ ಈ ಭೂ ಮಂಡಲದ ಸೃಷ್ಟಿಗೆ ಹಾಗೂ ಇಲ್ಲಿರುವ ಮನುಷ್ಯರು,ಪ್ರಾಣಿ ಪಕ್ಷಿಗಳು,ಕಷ್ಟ ಸುಖಗಳಿಗೆ ದೇವರು ಒಬ್ಬನೇ ಕಾರಣನಾಗಿದ್ದಾನೆ. ಎಲ್ಲ ಧರ್ಮದರುವವರ ಹೃದಯದ ವ್ಯವಸ್ಥೆ ಹಾಗೂ ರಕ್ತದ ಬಣ್ಣ ಒಂದೇ ಅಗಿದೆ ಆದ್ದರಿಂದ  ಎಲ್ಲರಿಗೂ ಪ್ರೀತಿಯನ್ನು ಹಂಚಿ,ಶಾಂತಿ ಸಹಬಾಳ್ವೆಯಿಂದ ಬುದುಕುವುದನ್ನು ಕಲಿಯಬೇಕು ಎಂದು ಹೇಳಿದರು.

ಹೋರಾಟಗಾರರಾದ ಬಾಳ್ಳು ಗೋಪಾಲ್ ಮಾತನಾಡಿ, ಮನುಷ್ಯ ಎಲ್ಲಾ ದರ್ಮದ ಉತ್ತಮ ಅಂಶಗಳನ್ನು ಪಡೆದು ಬದುಕ ಬೇಕು ಎಂದರು.
 ಮಾಜಿ ತಾಲ್ಲೂಕು ಪಂಚಾಯತಿ ಉಪಧ್ಯಾಕ್ಷ ಎಡೇಹಳ್ಳಿ ಆರ್ ಮಂಜುನಾಥ್ , ಸೇರಿದಂತೆ ಅನೇಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ತಮ್ಮ ಅನಿಸಿಕೆ ಗಳನ್ನ ಹಂಚಿಕೊಂಡರು.

ಮಸೀದಿ ಉದ್ಘಾಟನೆ ಹಿನ್ನಲೆಯಲ್ಲಿ ಸರ್ವರಿಗೂ ಅನ್ನ ದಾಸೋಹವನ್ನು ಏರ್ಪಡಿಸಲಾಗಿತ್ತು.

ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್ ಎಂ ಸ್ವಾಮಿ,ವರ್ತಕರ ಸಂಘದ ಅಧ್ಯಕ್ಷ ಬಿ.ಎನ್ ನಾಗೇಂದ್ರ.ಸಮಾಜ ಸೇವಕರಾದ ಅಮರ್ ನಾಥ್, ಹಾಸನದ ಜಾಮಿಯಾ ಮಸೀದಿಯ ಧರ್ಮಗುರುಗಳು ಜನಾಬ್ ಅಸ್ಲಂ  ಸಾಬ್,  ಮಾಜಿ ಶಾಸಕ ಬಿಜೆಪಿ ಮುಖಂಡ ಬಿ ಆರ್ ಗುರುದೇವ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಜ್ಯೋತಿ ಗುರುದೇವ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಮುಖಂಡ ಯಡಿಹಳ್ಳಿ ಆರ್ ಮಂಜುನಾಥ್,  ಪತ್ರಕರ್ತ ಬಾಳ್ಳು ಗೋಪಾಲ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ದಿನೇಶ್ , ಗ್ರಾಮ ಪಂಚಾಯತಿ ಸದಸ್ಯೆ ಗೌರಮ್ಮ, ಗ್ರಾಮ  ಪಂಚಾಯತಿ ಸದಸ್ಯೆ ಹಾಗೂ ರಾಜ್ಯ ವೀರಶೈವ ಸಮಾಜದ ಕಾರ್ಯದರ್ಶಿ ಅಕ್ಷಿತಾ, ಮಸೀದಿ ಅಧ್ಯಕ್ಷ  ತೌಫೀಕ್ ಅಹಮ್ಮದ್, ರೈತ ಸಂಘದ ಪಾಳ್ಯ ರಘು, ಅಲೂರು ಕರವೇ ನಟರಾಜ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಗ್ರಾಮ ಪಂಚಾಯತಿ ಸದಸ್ಯರು ಉದಯಶಂಕರ್  ಸೇರಿದಂತೆ ಜುಮಾ ಮಸೀದಿಯ ಅಧ್ಯಕ್ಷರು ,ಕಾರ್ಯದರ್ಶಿ ಹಾಗೂ ಸದಸ್ಯರು ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News