×
Ad

ಮಂಡ್ಯ: 'ಕಾಶ್ಮೀರ್‌ ಫೈಲ್ಸ್‌' ಚಿತ್ರದ ಕುರಿತ ಫಲಕದಲ್ಲಿ ಪ್ರಚೋದನಕಾರಿ ಸಂದೇಶ; ಬಜರಂಗಸೇನೆ ವಿರುದ್ಧ ದೂರು

Update: 2022-03-15 23:12 IST
ಸಾಂದರ್ಭಿಕ ಚಿತ್ರ

ಮಂಡ್ಯ: ‘ದಿ ಕಾಶ್ಮೀರ್‌ ಫೈಲ್ಸ್‌ ' ಚಿತ್ರವನ್ನು ನೋಡುವಂತೆ ಸಾರ್ವಜನಿಕರಿಗೆ ಪ್ರೇರೇಪಿಸುವ ನಗರದ ನಂದಾ ಚಿತ್ರಮಂದಿರದ ಮುಂದೆ ಬಜರಂಗಸೇನೆ ಕಾರ್ಯಕರ್ತರು ಹಾಕಿರುವ ಫ್ಲೆಕ್ಸ್‌ ಒಂದು ಪ್ರಚೋದನಾಕಾರಿಯಾಗಿದೆ’ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಇಲ್ಲಿನ ಪೂರ್ವ ಪೊಲೀಸ್‌ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.

ಬಜರಂಗಸೇನೆ ರಾಜ್ಯಾಧ್ಯಕ್ಷ ಹಾಗೂ ಕಾರ್ಯಕರ್ತರು ಪ್ರಚೋದನಾತ್ಮಕ ಬರಹದೊಂದಿಗೆ ಪೋಸ್ಟರ್‌ ಹಾಕಿದ್ದು,  ಕಿಡಿಗೇಡಿಗಳನ್ನು ಬಂಧಿಸಬೇಕು ಹಾಗೂ  ಕೂಡಲೇ ಪೊಲೀಸರು ಪೋಸ್ಟರ್‌ ತೆರವುಗೊಳಿಸಬೇಕು ಎಂದು ಮುಹಮ್ಮದ್ ತಾಹಿರ್ ಎಂಬವರು  ದೂರಿನಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News