ಉಕ್ರೇನ್ ಯುದ್ಧದ ವಿಷಯದಲ್ಲಿ ಭಾರತದ ನಿಲುವಿನಿಂದ ತೀವ್ರ ನಿರಾಶೆ: ಬ್ರಿಟನ್

Update: 2022-03-17 17:49 GMT
photo courtesy:twitter

ಲಂಡನ್, ಮಾ.17: ಉಕ್ರೇನ್ ಮೇಲೆ ರಶ್ಯ ಆಕ್ರಮಣದ ಕುರಿತು ಭಾರತ ತಳೆದಿರುವ ನಿಲುವಿನಿಂದ ಬ್ರಿಟನ್ ಗೆ ತೀವ್ರ ನಿರಾಶೆಯಾಗಿದೆ. ಆದರೂ ಭಾರತ ತನ್ನ ಪ್ರಮುಖ ವ್ಯಾಪಾರ ಪಾಲುದಾರ ಎಂದು ಪರಿಗಣಿಸುತ್ತದೆ ಎಂದು ಬ್ರಿಟನ್‌ನ ವ್ಯಾಪಾರ ಇಲಾಖೆ ಸಚಿವೆ ಆ್ಯನೆ ಮೇರಿ ಟ್ರೆವೆಲ್ಯಾನ್ ಗುರುವಾರ ಹೇಳಿದ್ದಾರೆ.

ಭಾರತದ ನಿಲುವು ಉಭಯ ದೇಶಗಳ ವ್ಯಾಪಾರ ಸಂಬಂಧದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ತೀವ್ರ ನಿರಾಶೆಯಾಗಿದೆ. ಆದರೂ ಭಾರತದ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದ್ದೇವೆ ಎಂದರು. ಭಾರತವು ನಮ್ಮ ಪ್ರಮುಖ ವ್ಯಾಪಾರ ಪಾಲುದಾರ ದೇಶವಾಗಿದೆ. ಮುಂದಿನ ದಿನದಲ್ಲಿ ಯುದ್ಧ ಮುಂದುವರಿಸಲು ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಪುಟಿನ್ ಕ್ರೋಢೀಕರಿಸದಂತೆ ನಾವು ವಿಶ್ವದೆಲ್ಲೆಡೆಯ ದೇಶಗಳೊಂದಿಗೆ ಜತೆಗೂಡಿ ಕ್ರಮ ಕೈಗೊಳ್ಳಲಿದ್ದೇವೆ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News