ಚಾಮರಾಜನಗರ; ಮಹಿಳೆ ಆತ್ಮಹತ್ಯೆ ಪ್ರಕರಣ: ಬಂಧಿತ ಪತಿ ಪಿಡಿಒ ಅಮಾನತು
ಚಾಮರಾಜನಗರ : ಪತ್ನಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಪತಿ ಆನಂದ್ ಕಾಂಬ್ಳೆನನ್ನು ಪಿಡಿಒ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹನೂರು ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯತ್ ಪಿಡಿಒ ಆನಂದ್ ಕಾಂಬ್ಳೆ ಪತ್ನಿಯ ಆತ್ಮಹತ್ಯೆ ಪ್ರಕರಣ ದಲ್ಲಿ ಬಂಧಿತನಾಗಿದ್ದು, ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಬಸ್ತಿಪುರದಲ್ಲಿ ವಾಸವಾಗಿದ್ದ ಹನೂರು ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯತ್ ಪಿಡಿಒ ಆನಂದ್ ಕಾಂಬ್ಳೆ ಕುಟುಂಬವು, ಕೌಟಂಬಿಕ ಕಲಹ ಹಾಗೂ ವರದಕ್ಷಿಣೆ ಮತ್ತು ಶೀಲ ಶಂಕಿಸುತ್ತಿದ್ದ ಪತಿಯ ಪರ್ತನೆಯಿಂದ ದಿವ್ಯಾಶ್ರೀ ತನ್ನ 9 ತಿಂಗಳ ಮಗುವನ್ನು ಬಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿತ್ತು.
ಈ ಸಂಬಂಧ ದಿವ್ಯಾಶ್ರೀ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದು, ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಪಿಡಿಒ ಆನಂದ್ ಕಾಂಬ್ಳೆ ನನ್ನು ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ನಿಯಮದ ಪ್ರಕಾರ ಪೊಲೀಸ್ ಬಂಧನದಲ್ಲಿ 48 ಗಂಟೆ ಕಳೆದ ಹಿನ್ನೆಲೆಯಲ್ಲಿ ಪಿಡಿಒ ಆನಂದ್ ಕಾಂಬ್ಳೆ ನನ್ನು ಅಮಾನತು ಪಡಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.