×
Ad

ಲಂಚಕ್ಕೆ ಬೇಡಿಕೆ ಇಟ್ಟ ಆರೋಪ: ಇನ್‍ಸ್ಪೆಕ್ಟರ್, ಗುತ್ತಿಗೆ ನೌಕರನಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Update: 2022-03-18 17:28 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.18: ಬಿಎಂಟಿಎಫ್‍ನಲ್ಲಿ ದಾಖಲಾಗಿದ್ದ ಪ್ರಕರಣದಿಂದ ಕೈಬಿಡಲು ಆರೋಪಿ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇನ್‍ಸ್ಪೆಕ್ಟರ್ ಮತ್ತು ಗುತ್ತಿಗೆ ನೌಕರನಿಗೆ 3 ವರ್ಷ ಜೈಲು, 25 ಸಾವಿರ ರೂ.ದಂಡ ವಿಧಿಸಿ 23ನೆ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 

ಪ್ರಸ್ತುತ ರೈಲ್ವೆ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ವಿ.ಶಿವಕುಮಾರ್ ಮತ್ತು ಕಿಯೋನಿಕ್ಸ್ ಸಂಸ್ಥೆಯಿಂದ ಗುತ್ತಿಗೆ ಆಧಾರದ ಮೇಲೆ ಬಿಎಂಟಿಎಫ್‍ನಲ್ಲಿ ನೇಮಕಗೊಂಡಿದ್ದ ಕ್ಲರ್ಕ್ ಕೆ.ಎನ್.ಚೇತನ್ ಶಿಕ್ಷೆಗೆ ಗುರಿಯಾದವರು. 

2018ರಲ್ಲಿ ಬಿಎಂಟಿಎಫ್ ಠಾಣೆಯಲ್ಲಿ ಉತ್ತರಹಳ್ಳಿಯ ನಿವಾಸಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪ ಮುಕ್ತ ಮಾಡಲು ಆರೋಪಿಗೆ ಅಂದಿನ ಎಸ್‍ಐ ಶಿವಕುಮಾರ್, 80 ಸಾವಿರ ರೂ.ಲಂಚಕ್ಕೆ ಬೇಡಿಕೆ ಒಡ್ಡಿದ್ದ. ಈ ಬಗ್ಗೆ ಎಸಿಬಿಗೆ ನೊಂದ ವ್ಯಕ್ತಿ ದೂರು ನೀಡಿದ್ದರು. 

ಅಭಿಯೋಜನೆಯ ವಿರುದ್ಧವಾಗಿ ದೂರುದಾರ ಸಾಕ್ಷಿ ನುಡಿದಿದ್ದಾನೆ. ಆದರೆ, ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ನ್ಯಾಯಾಲಯ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ. ಪ್ರಕರಣದ ವಿರುದ್ಧ ಸಾಕ್ಷಿ ನುಡಿದ ದೂರುದಾರನಿಗೆ ಕಾರಣ ಕೇಳಿ ಕೋರ್ಟ್ ಶೋಕಾಸ್ ನೋಟಿಸ್ ಹೊರಡಿಸಿದೆ. ಮಾ.30ಕ್ಕೆ ಪ್ರಕರಣದ ವಿಚಾರಣೆಗೆ ಬರಲಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News