×
Ad

ಸಾರಿಗೆ ನೌಕರರಿಗೆ ಶೀಘ್ರ ವೇತನ: ಸಚಿವ ಬಿ.ಶ್ರೀರಾಮುಲು

Update: 2022-03-18 23:04 IST

ಬೆಂಗಳೂರು, ಮಾ.18: ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಒಂದೂವರೆ ಎರಡು ತಿಂಗಳ ಅಂತರದಲ್ಲಿ ವೇತನ ಪಾವತಿಯಾಗುತ್ತಿದ್ದು, ಅದನ್ನು ಪ್ರತಿ ತಿಂಗಳು ಪಾವತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಅವರು, ಸಾರಿಗೆ ನೌಕರರಿಗೆ ಆರೇಳು ತಿಂಗಳಿಗೆ ವೇತನ ಪಾವತಿಯಾಗುತ್ತಿದ್ದು, ತಾವು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಇದನ್ನು ಒಂದೂವರೆಯಿಂದ ಎರಡು ತಿಂಗಳಿಗೆ ಇಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ನೌಕರರಿಗೆ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನೌಕರರಿಗೆ ವೇತನ ನೀಡಲು ಸರಕಾರ 3 ಸಾವಿರ ಕೋಟಿ ರೂ. ನೀಡಿದೆ. ಇದರಿಂದಾಗಿ ಆರೇಳು ತಿಂಗಳಿಗೆ ನೀಡುತ್ತಿದ್ದ ವೇತನವನ್ನು ಒಂದೂವರೆಯಿಂದ ಎರಡು ತಿಂಗಳಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News