×
Ad

ಕುಟುಂಬ ಚೆನ್ನಾಗಿದ್ದರೆ, ಸಮಾಜ-ದೇಶ- ವಿಶ್ವವೇ ಸುಬಿಕ್ಷೆಯಿಂದ ಕೂಡಿರುತ್ತದೆ: ಮುಹಮ್ಮದ್ ಕುಂಞ

Update: 2022-03-18 23:32 IST

ಹಾಸನ: ಮಾ.‌,18. ಕುಟುಂಬ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ, ಸಮಾಜ ಚೆನ್ನಾಗಿದ್ದರೆ, ದೇಶ ಸುಬಿಕ್ಷೆಯಿಂದ ಕೂಡಿರುತ್ತದೆ ಎಂದು ಶಾಂತಿ ಪ್ರಕಾಶನ, ಮಂಗಳೂರು ವ್ಯವಸ್ಥಾಪಕರು ಮುಹಮ್ಮದ್ ಕುಂಞ  ಹೇಳಿದರು.

ಇಸ್ಲಾಮಿಕ್ ಸೆಂಟರ್ ನಲ್ಲಿ ಜಮಾತ್-ಎ-ಇಸ್ಲಾಮಿ ಹಮ್ಮಿಕೊಂಡಿದ್ದ ಸುಭದ್ರ ಕುಟುಂಬ ಸುಭದ್ರ ಸಮಾಜ ಎರಡು ದಿನದ ಕನ್ನಡದಲ್ಲಿ ಕುರಾನ್ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಮನೆಯಲ್ಲಿ ಪ್ರೀತಿ-ವಿಶ್ವಾಸ ಕುಟುಂಬ ಸಂಬಂಧ ಚೆನ್ನಾಗಿದ್ದರೆ, ನಮ್ಮ ಸಮಾಜ ನಮ್ಮ ದೇಶ ಶಿಸ್ತಿನಿಂದ ಕೂಡಿರುತ್ತದೆ ಎಲ್ಲಾ ದೇಶಗಳು ಶಿಸ್ತಿನಿಂದ  ಕೂಡಿದ್ದರೆ. ವಿಶ್ವ ಸುಂದರವಾಗಿರುತ್ತದೆ. ವಿಶ್ವಶಾಂತಿಗಾಗಿ ಕುಟುಂಬದ ನೆಮ್ಮದಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಮನುಷ್ಯ ಪ್ರೀತಿಯಿಂದ ಬದುಕಿದರೆ ಸಮಾಜದ ಸೌಹಾರ್ದತೆಯ ಬೇರುಗಳು ಗಟ್ಟಿಗೊಳ್ಳುತ್ತವೆ. ಪ್ರೀತಿಯೆಂಬುದು ಸ್ವಾಭಾವಿಕ ದ್ವೇಷ, ಹಿಂಸೆ ಕೃತಕ. ಅನೇಕ ಅನಾಚಾರಗಳನ್ನು ಮನುಷ್ಯ  ಸೃಷ್ಟಿಸಿಕೊಂಡಿದ್ದಾನೆ ಎಂದು ಹೇಳಿದರು.

ನಾವು ಸ್ವಾಭಾವಿಕವಾಗಿ ಬದುಕಿದರೆ ಆರೋಗ್ಯವಂತ ಸಮಾಜ ಹಾಗೂ ಆರೋಗ್ಯವಂತ ದೇಹ ಮತ್ತು ಮನಸ್ಸು ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಇಂದು  ಕುಟುಂಬ ವ್ಯವಸ್ಥೆ ದುರ್ಬಲವಾಗುತ್ತಿದೆ ಇದನ್ನು ಬಲಪಡಿಸುವುದು ನಮ್ಮ ಕರ್ತವ್ಯವಾಗಿದೆ. ಕುಟುಂಬ ವ್ಯವಸ್ಥೆ ಎಂಬುದು ನಿನ್ನೆಮೊನ್ನೆ ಬಂದಿದ್ದಲ್ಲ ಈ  ವ್ಯವಸ್ಥೆ ಸನಾತನವಾಗಿದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಅಡಿಶಿನಲ್ ಎಸ್ಪಿ ನಂದಿನಿ ಅವರು ಮಾತನಾಡಿ,  ಮನುಷ್ಯ ಸರಳವಾಗಿದ್ದರೆ ನೆಮ್ಮದಿಯಿಂದ ಬದುಕಬಹುದು ಸಮಾಜದಲ್ಲಿ ಅಪರಾಧಗಳನ್ನು ಸಹ ಕಡಿಮೆ ಮಾಡಬಹುದು ಎಂದು ಹೇಳಿದರು. 

ಒಂದು ಉತ್ತಮ ಸಮಾಜ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಅಗತ್ಯವಿದೆ ಎನ್ನುತ್ತಾ, ಶಿಕ್ಷಣ ಪಡುದಂತಹ ವ್ಯಕ್ತಿಗಳಲ್ಲಿ ವಿವೇಚನೆ , ವಿವೇಕ ಮತ್ತು ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದು ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಧರ್ಮ ಎಂದರೆ ಶಾಂತಿ, ವಿಶ್ವದ ಎಲ್ಲ ಧರ್ಮಗಳು ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ಬೋಧಿಸುತ್ತವೆ. ಧರ್ಮಗಳನ್ನು ಅರ್ಥೈಸಿಕೊಳ್ಳುವಲ್ಲಿ ನಾವುಗಳು ಎಡವಿದ್ದೇವೆ ಎಂದರು.

 ಯುವಕರು ಹಿರಿಯರ ಮಾತುಗಳನ್ನು ನಿರ್ಲಕ್ಷಿಸುತ್ತಿದ್ದಾರೆ.  ಮಕ್ಕಳು ತಂದೆ ತಾಯಿಗಳನ್ನು  ಘೋಷಿಸಲು ಹಿಂದೇಟು ಹಾಕುತ್ತಿದ್ದಾರೆ, ತಂದೆ-ತಾಯಿ ಮೇಲೆ ಹಲ್ಲೆ ನಡೆಸು ವಂತಹ ದೂರುಗಳು ಹಚ್ಚಾಗುತ್ತಿವೆ ಎಂದು ವಿಶಾದ ವ್ಯಕ್ತ ಪಡಿಸಿದರು.

ಕಾರ್ಯಕ್ರಮ ದಲ್ಲಿ ಜಾನಪದ ವಿದ್ವಾಂಸ ಡಾ. ಹಂಪನ ಹಳ್ಳಿ ತಿಮ್ಮೆಗೌಡ. ಜಿಲ್ಲಾದ್ಯಾಕ್ಷ ಖಲಕ್ ಸಾಬ್ಜ , ಮಾಅತೆ ಇಸ್ಲಾಮೀ ಹಿಂದ್  ಸ್ಥಾನೀಯ ಅಧ್ಯಕ್ಷರಾದ ಸದ್ರುಲ್ಲಾ ಖಾನ್ , ಸಜದ್ ಪಾಶ, ತೌಫೀಕ್ ಅಹಮದ್ ಅನೇಕರು  ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News