VIDEO- ಕುರ್ ಆನ್, ಬೈಬಲ್ ಧಾರ್ಮಿಕ ಗ್ರಂಥಗಳು, ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ: ಪ್ರತಾಪ್ ಸಿಂಹ

Update: 2022-03-19 13:31 GMT

ಮಡಿಕೇರಿ:  ‘ಭಗವದ್ಗೀತೆ’ಯಲ್ಲಿ ಜೀವನದ ಮೌಲ್ಯಗಳಿದ್ದು, ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾದ ವಿಚಾರಗಳಿದೆಯಾದ್ದರಿಂದ, ಇದನ್ನು  ಪಠ್ಯ ಪುಸ್ತಕದಲ್ಲಿ ಸೇರಿಸುವುದು ತಪ್ಪಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಿಸಿದ್ದಾರೆ.

ನಗರದ ಸುದರ್ಶನ ಅತಿಥಿ ಗೃಹದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ. ಇದರಲ್ಲಿ ಪ್ರತಿಯೊಬ್ಬರ ಬದುಕಿಗೆ ಅತ್ಯವಶ್ಯಕವಾದ ನೀತಿ ಪಾಠ, ನೈತಿಕ ವಿಚಾರಗಳಿವೆ. ಸರಿ ತಪ್ಪುಗಳ ಪರಾಮರ್ಷೆ ಮಾಡಿಕೊಳ್ಳಲು, ವಿವೇಚನೆ ಬೆಳೆಸಿಕೊಳ್ಳಲು, ನೈತಿಕತೆಯನ್ನು ಮೂಡಿಸಿಕೊಳ್ಳಲು ಭಗವದ್ಗೀತೆ ಸಹಕಾರಿಯೆಂದರು.

ಭಗವದ್ಗೀತೆಯನ್ನ ಇತರೆ ಗ್ರಂಥಗಳಂತೆ ನೋಡಲು ಹೋಗಬೇಡಿ. ಇದು ಪ್ರತಿಯೊಬ್ಬರು ಓದಲೇ ಬೇಕಾದ ಗ್ರಂಥವಾಗಿದೆ ಎಂದರು. 

ಹಿಜಾಬ್‍ಗಾಗಿ ಬಂದ್ ಖಂಡನೀಯ-ಹಿಜಾಬ್ ಬಗ್ಗೆ ನ್ಯಾಯಾಲಯ ತೀರ್ಪು ನೀಡಿದ್ದರೂ, ತೀರ್ಪಿನ ವಿರುದ್ಧ ಕೆಲವರು ಅಂಗಡಿ ಬಂದ್ ಮಾಡಿ ಪ್ರತಿಭಟಿಸಿದ್ದು ಸರಿಯಲ್ಲ. ದೇಶದ ಸಂವಿಧಾನಕ್ಕಿಂತ ಧರ್ಮವೇ ದೊಡ್ಡದು ಎಂಬ ಇಂಥವರ ವರ್ತನೆ ಖಂಡನೀಯ ಎಂದರು.

ನಾವು ಬಾಳುತ್ತಿರುವ ದೇಶದ ಸಂವಿಧಾನವನ್ನು ಗೌರವಿಸುವುದು ಅತ್ಯಮತ ಮುಖ್ಯ. ನಂತರವೇ ನಮ್ಮ ಉಡುಗೆ ತೊಡುಗೆ. ನ್ಯಾಯಾಲಯದ ತೀರ್ಪು ಗೌರವಿಸುವಂತೆ  ಸಂಸದರು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಮಡಿಕೇರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅಶ್ವಿನ್, ಪ್ರಮುಖರಾದ ನಾಗೇಶ್ ಕುಂದಲ್ಪಾಡಿ, ಸುಬ್ರಹ್ಮಣ್ಯ ಉಪಾಧ್ಯಾಯ ಹಾಜರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News