ಶಾಲಾ ಪಠ್ಯದಲ್ಲಿ ಭಗವದ್ಗೀತೆ ವಿಚಾರ: ಕೊರೋನಗಿಂತಲೂ ಅಪಾಯಕಾರಿ ಎಂದ ಶಾಸಕ ತನ್ವೀರ್ ಸೇಠ್

Update: 2022-03-19 12:37 GMT
ಶಾಸಕ ತನ್ವೀರ್ ಸೇಠ್

ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ಕಲಿಗೆ ಹೆಚ್ವಿನ ಆಧ್ಯತೆ ನೀಡುವ ಬದಲು ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಲು ಚಿಂತಿಸುತ್ತಿರುವುದು ಕೊರೋನಗಿಂತಲೂ ಅಪಾಯಕಾರಿ ಎಂದು ಶಾಸಕ ತನ್ವೀರ್ ಸೇಠ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುತ್ತೇನೆ ಎಂದಿರುವುದು ಬಹಳ ಅಪಾಯಕಾರಿ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಕೆಟ್ಟ ಪರಿಣಾಮ‌ಬೀರಲು ಮುಂದಾಗಿರುವುದು ನೋವಿನ ಸಂಗತಿ ಎಂದು ಹೇಳಿದರು.

ಇದನ್ನೂ ಓದಿ:  ರಾಜ್ಯದಲ್ಲಿ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರ: ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ...

ಒಬ್ಬರ ಧರ್ಮವನ್ನು ಇನ್ನೊಬ್ಬರ ಮೇಲೆ ಹೇರುವುದು ಅಪರಾದ ಎಂದು ಸರ್ಕಾರ ಮತಾಂತರ ನಿಷೇಧ ಕಾಯ್ದೆಯಲ್ಲಿ ಹೇಳಿದೆ. ಇದೀಗ ಶಿಕ್ಷಣ ಧರ್ಮ ವಿಚಾರ ಅಳವಡಿಸಲು ಮುಂದಾಗಿ ತನ್ನದೆ ನಿಯಮ ಉಲ್ಲಂಘಿಸುತ್ತಿದೆ. ಭಗವದ್ಗೀತೆ ಅಳವಡಿಸುವುದರಿಂದ ಏನಾಗುತ್ತೆ ಏನಾಗಲ್ಲ ಎಂಬುದು ಮುಖ್ಯವಲ್ಲ,  ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಇದು ಬೇಡದ ವಿಚಾರ ಎಂದು ಹೇಳಿದರು.

ಧಾರ್ಮಿಕ ಚಟುವಟಿಕೆ ಭಾವನೆಗಳನ್ನು ತರಗತಿಗೆ ತರಬಾರದು ಎಂದು ಹೈಕೋಟ್೯ ಹೇಳಿದೆ. ತೀರ್ಪನ್ನು ಒಪ್ಪುವುದು ಬಿಡುವುದು ಬೇರೆ ವಿಚಾರ. ನ್ಯಾಯಾಲಯದ ಮೇಲೆ ನಂಬಿಕೆ ಗೌರವ ಇದೆ. ಎಂದು ಹೇಳಿದರು.

ಕಾಶ್ಮೀರ ಫೈಲ್ಸ್ ಸಿನೆಮಾ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ನಾನು ಚಿಕ್ಕವನಿಂದಲೂ ಸಿನಿಮಾ ನೋಡಿದವನಲ್ಲ, ಈಗಲೂ ನೋಡುವುದಿಲ್ಲ,  ಕಾಶ್ಮೀರ ಫೈಲ್ಸ್ ಗುಜರಾತ್ ಫೈಲ್ಸ್, ಇನ್ಯಾವುದೋ ಫೈಲ್ಸ್  ಬಗ್ಗೆ ಗೊತ್ತಿಲ್ಲ,  ನನಗೂ ಅದಕ್ಕೂ ಯಾವುದೇ  ಸಂಬಂಧವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News