×
Ad

ಬಾಗಲಕೋಟೆ: ಸಿಆರ್ ಪಿಎಫ್ ಯೋಧ ಆತ್ಮಹತ್ಯೆ

Update: 2022-03-19 17:41 IST

ಬಾಗಲಕೋಟೆ, ಮಾ.19: ಹದಿನೈದು ದಿನಗಳ ಕಾಲ ರಜೆ ಪಡೆದು ಊರಿಗೆ ಬಂದಿದ್ದ ಸಿಆರ್‍ಪಿಎಫ್ ಯೋಧ ಆತ್ಮಹತ್ಯೆಗೆ ಮಾಡಿರುವುದಾಗಿ ವರದಿಯಾಗಿದೆ.

ಮುಧೋಳ ತಾಲೂಕಿನ ಮುಗಳಖೇಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮುಗಳಖೇಡ ನಾಗಪ್ಪ ಗುಂಡಕಲ್(31) ಮೃತ ಯೋಧರಾಗಿದ್ದಾರೆ ಎಂದು ತಿಳಿದುಬಂದಿದೆ. 

ನಿನ್ನೆ ಗ್ರಾಮದ ತಮ್ಮ ಹೊಲದಲ್ಲಿರುವ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಯೋಧ 12 ವರ್ಷದಿಂದ ಬೆಂಗಳೂರಿನ ಯಲಹಂಕದಲ್ಲಿ ಸಿಆರ್ ಪಿಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News