×
Ad

ಸರ್ಕಾರಕ್ಕೆ ನೈತಿಕತೆ ಇದ್ದರೆ ಈ ದೇಶದ್ರೋಹಿಯನ್ನು ಜೈಲಿಗಟ್ಟಬೇಕು: ಪ್ರಭಾಕರ್ ಭಟ್ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ

Update: 2022-03-20 22:19 IST
 ಪ್ರಿಯಾಂಕ್ ಖರ್ಗೆ   |   ಪ್ರಭಾಕರ್ ಭಟ್

ಬೆಂಗಳೂರು:  'ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ರಾಷ್ಟ್ರ ಧ್ವಜ ಆಗಬಹುದು' ಎಂದು ಆರೆಸೆಸ್ಸ್ ಮುಖಂಡ‌ ಕಲ್ಲಡ್ಕ ಪ್ರಭಾಕರ್ ಭಟ್ ನೀಡಿರುವ  ಹೇಳಿಕೆಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ,  ''ಭಾರತದ ಸ್ವತಂತ್ರ ಹೋರಾಟದಲ್ಲಿ ಹನಿ ಬೆವರನ್ನೂ ಹರಿಸದೆ ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಸಂಘಪರಿವಾರ ಇಂದು ಬಹುತ್ವ ಭಾರತದ ಅಸ್ತಿತ್ವವನ್ನ ನಾಶಪಡಿಸಲು ಯೋಜನೆ ರೂಪಿಸಿದೆ. ಪ್ರತಿದಿನವೂ ರಾಷ್ಟ್ರಧ್ವಜದ ವಿರೋಧಿ ಹೇಳಿಕೆ ಕೊಡುತ್ತ ತಿರಂಗಾದ ಘನತೆ ಕಳೆಯುತ್ತಿದ್ದಾರೆ. ಈ ಸರ್ಕಾರಕ್ಕೆ ನೈತಿಕತೆ ಇದ್ದರೆ ಈ ದೇಶದ್ರೋಹಿಯನ್ನು ಜೈಲಿಗಟ್ಟಬೇಕು'' ಎಂದು ಕಿಡಿಗಾರಿದ್ದಾರೆ.

ಇದನ್ನೂ ಓದಿ: ಕೇಸರಿ ಧ್ವಜವೇ ಮುಂದೆ ರಾಷ್ಟ್ರಧ್ವಜ ಆಗಬಹುದು ಎಂದಿರುವ ಪ್ರಭಾಕರ ಭಟ್ ಹಿನ್ನೆಲೆ ನನಗೆ ಗೊತ್ತಿಲ್ಲ: ಡಿ.ಕೆ. ಶಿವಕುಮಾರ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News