VIDEO-ಹಾಸನ: ದಂತ ಮಾರಾಟಕ್ಕೆ ಯತ್ನಿಸಿದ ಪ್ರಕರಣ; ಮರಣೋತ್ತರ ಪರೀಕ್ಷೆಗೆ ಆನೆಯ ಕಳೇಬರ ಹೊರತೆಗೆದ ಪೊಲೀಸರು

Update: 2022-03-20 17:59 GMT

ಹಾಸನ : ಆರೇಳು ತಿಂಗಳ ಹಿಂದೆ ಬೆಳೆಯ ರಕ್ಷಣೆಗಾಗಿ ಹಾಕಲಾಗಿದ್ದ ವಿದ್ಯುತ್ ತಂತಿಗೆ  ಸಿಲುಕಿ ಸಾವನಪ್ಪಿದ್ದು ಕಾಡಾನೆಯೊಂದರ  ದಂತ ತೆಗೆದು ಮಾರಾಟಕ್ಕೆ ಯತ್ನಿಸುವ ವೇಳೆ ಆರೋಪಿಗಳನ್ನು ಬಂಧಿಸಿದ ಬೆಂಗಳೂರಿನ ಪೊಲೀಸರು ಆರೋಪಿಗಳ ಮಾಹಿತಿ ಆಧರಿಸಿ ಮರಣೋತ್ತರ ಪರೀಕ್ಷೆ ನಡೆಸಲು ಆನೆ ಕಳೇಬರಹವನ್ನು ಮಣ್ಣಿನಿಂದ ಹೊರ ತೆಗೆದಿದ್ದಾರೆ. 

ಹಾಸನ ತಾಲೂಕಿನ ವೀರಾಪುರ ಗ್ರಾಮದಲ್ಲಿ ರೈತರು ತಾವು ಬೆಳೆದ ಬೆಳೆಯ ರಕ್ಷಣೆಗೆಂದು ಅಕ್ರಮ ವಿದ್ಯುತ್ ಹರಿಸಿದ್ದ ವೇಳೆ ಕಳೆದ ಆರೆಳು ತಿಂಗಳ ಹಿಂದೆ ಕಾಡಾನೆಯೊಂದು ಬಲಿಯಾಗಿದ್ದು, ಆನೆ ಮೃತಪಟ್ಟಾಗ ಮಾಹಿತಿಯನ್ನು ಯಾರಿಗು ತಿಳಿಸದೇ ಮುಚ್ಚಿಟ್ಟು ಆನೆಯನ್ನು ಮಣ್ಣಿನಲ್ಲಿ ಆರೋಪಿಗಳು ಹೂತಿದ್ದರು. ಆನೆ ಮೃತದೇಹ ಮಣ್ಣಿನಲ್ಲಿ ಕೊಳೆತ ಬಳಿಕ ಹೂತಿದ್ದ ಕಾಡಾನೆಯ ದಂತ ಕಿತ್ತು ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರಾಟ ಮಾಡುವ ಯತ್ನದಲ್ಲಿದ್ದಾಗ ಬೆಂಗಳೂರಿನ ಪೊಲೀಸರು ಹಾಸನ ತಾಲೂಕಿನ ವೀರಾಪುರ ಗ್ರಾಮದ ಚಂದ್ರೇಗೌಡ, ನಾಗರಾಜ್, ತಿಲಕ್ ಎಂಬುವರನ್ನು ಬಂಧಿಸಿದ್ದಾರೆ. ಕೋಟ್ಯಾಂತರ ರೂ ಬೆಳೆ ಬಾಳುವ ದಂತ ಮಾರಾಟ ಮಾಡಲು ರೋಪಿಗಳು ಸಜ್ಜಾಗಿದ್ದರು.

ಖಚಿತ ಮಾಹಿತಿ ಪಡೆದ ಬೆಂಗಳೂರು ಪೊಲೀಸರು ಸ್ಥಳಕ್ಕೆ ಹೋಗಿ ಆರೋಪಿಗಳನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸತ್ಯಾಂಶವನ್ನು ಒಪ್ಪಿಕೊಂಡಿದ್ದು. ಸತ್ಯ ಆಧಾರಿಸಿ ಹಾಸನ ತಾಲೂಕಿನ ವೀರಪುರ ಗ್ರಾಮಕ್ಕೆ ಬೆಂಗಳೂರು ಪೊಲೀಸರು ದಾವಿಸಿ ಕಾಡಾನೆ ಹೂತಿಟ್ಟ ಸ್ಥಳವನ್ನು ಗುರುತಿಸಿ ಜೆಸಿಬಿ ಮೂಲಕ ಮಣ್ಣು ತೆಗೆಸಿ ಆನೆಯ ದೇಹದ ಕೊಳೆತ ಕಳೇಬರ ಹೊರತೆಗೆದು ಪರೀಕ್ಷೆಗೆ ಹಾಜರುಪಡಿಸಲಾಯಿತು.

ಅರಣ್ಯ ತನಿಖಾ ದಳದ ಡಿಸಿಎಫ್ ರವೀಂದ್ರ ನೇತೃತ್ವದಲ್ಲಿ ಸ್ಥಳ ಮಹಜರ್ ಮಾಡಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News