×
Ad

''ಕಾಶ್ಮೀರ್ ಫೈಲ್ಸ್ ನೋಡಲು ಇರುವ ಆಸಕ್ತಿ ಕಚೇರಿಯ ಕೆಲಸದ ಫೈಲ್ಸ್‌ಗಳನ್ನು ನೋಡಲು ಇದ್ದಿದ್ದರೆ...''

Update: 2022-03-22 12:30 IST

ಬೆಂಗಳೂರು:  ''ಸಚಿವರು, ಮುಖ್ಯಮಂತ್ರಿಗಳಿಗೆ ಕಾಶ್ಮೀರ್ ಫೈಲ್ಸ್ ನೋಡಲು ಇರುವ ಆಸಕ್ತಿ ಕಚೇರಿಯ ಆಡಳಿತಾತ್ಮಕ ಫೈಲ್ಸ್‌ಗಳನ್ನು ನೋಡಲು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ'' ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ,  ''ಪಠ್ಯಪುಸ್ತಕ ಪ್ರಿಂಟ್ ಆಗ್ತಿಲ್ಲ, ರಸ್ತೆ ಗುಂಡಿ ಮುಚ್ಚಲಿಲ್ಲ, ನೆರೆ ಪರಿಹಾರದ ಮನೆಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ , ಸಿಎಂ ಕಚೇರಿಯಲ್ಲಿ ಕಡತಗಳ ವಿಲೇವಾರಿ ಆಗುತ್ತಿಲ್ಲ'' ಎಂದು ಕಿಡಿಗಾರಿದ್ದಾರೆ. 

‘ರಾಜ್ಯ ಸರಕಾರ ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ್ದು, ಕಳೆದ ವಾರ ಸ್ಪೀಕರ್ ಕಾಗೇರಿ ಅವರು ಎಲ್ಲ ಸಚಿವರು, ಶಾಸಕರಿಗೆ ಸಿನೆಮಾ ವೀಕ್ಷಣೆ ಮಾಡಲು ವಿಧಾಸನಭೆಯಲ್ಲಿ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಹಾಗೂ ಆಡಳಿತ ಪಕ್ಷದ ಶಾಸಕರು ಸಿನೆಮಾ ವೀಕ್ಷಣೆ ಮಾಡಿದ್ದರು. 

ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News