×
Ad

ಕಲ್ಲಡ್ಕ ಪ್ರಭಾಕರ ಭಟ್ ಬಂಧನ, ಈಶ್ವರಪ್ಪರ ರಾಜೀನಾಮೆ ಯಾವಾಗ: ಸಿಎಂಗೆ ಕಾಂಗ್ರೆಸ್ ಪ್ರಶ್ನೆ

Update: 2022-03-22 14:52 IST

ಬೆಂಗಳೂರು: 'ದೇಶ ವಿರೋಧಿಗಳನ್ನು ಸಹಿಸುವುದಿಲ್ಲ ಎಂದು ಹೇಳಿಕೆ ಕೊಟ್ಟು ವೀರಾವೇಶ ಮೆರೆದಿದ್ದೀರಿ, ಸಂತೋಷ. ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ದೇಶದ್ರೋಹಿ ಕಲ್ಲಡ್ಕ ಪ್ರಭಾಕರ ಭಟ್ ಯಾವಾಗ ಬಂಧಿಸುತ್ತೀರಿ? ಆತನನ್ನು ಜೈಲಿಗಟ್ಟಿ ನಿಮ್ಮ ಹೇಳಿಕೆಗೆ ಬದ್ಧತೆ ತೋರಿಸಿ. ಹಾಗೆಯೇ ಈಶ್ವರಪ್ಪರ ರಾಜೀನಾಮೆ ಯಾವಾಗ ಪಡೆಯುವಿರಿ?' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ  ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್,  ''ಬಿಜೆಪಿ ಸರ್ಕಾರದ ಸಾಧನೆಗಳು, ಸಿನೆಮಾ ಪ್ರಚಾರ ಮಾಡುವುದು, ಸಿನೆಮಾ ನೋಡುವುದು, ಸಿನೆಮಾ ಮಾಡುವುದು! ಕೃಷಿ ಇಲಾಖೆಯಲ್ಲಿ ಜ್ವಲಂತ ಸಮಸ್ಯೆಗಳಿವೆ, ರೈತರ ಸಂಕಷ್ಟ ಹಲವಾರಿವೆ, ರಸಗೊಬ್ಬರ ಅಭಾವವಿದೆ. ಆದರೆ ಕೃಷಿ ಸಚಿವರು ನಟನೆಯಲ್ಲಿ ಬ್ಯುಸಿಯಾಗಿದ್ದಾರೆ!'' ಎಂದು ಟೀಕಿಸಿದೆ. 

'ರೈತರಿಗೂ ನಿಮ್ಮ ಕಾಲ್‌ಶೀಟ್ ಬೇಕಿತ್ತು, ಯಾವಾಗ ಕೊಡುವಿರಿ?' ಎಂದು  ಕೃಷಿ ಸಚಿವ ಬಿ.ಸಿ ಪಾಟೀಲ್ ಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News