×
Ad

ಥಿಯೇಟರ್​ಗಳಿಂದ 'ಜೇಮ್ಸ್' ತೆಗೆದು ‘ಕಾಶ್ಮೀರ್‌ ಫೈಲ್ಸ್‌’ ಚಿತ್ರ ತೋರಿಸಲು ಒತ್ತಡ: ನಿರ್ಮಾಪಕನಿಂದ ಸಿದ್ದರಾಮಯ್ಯ ಭೇಟಿ

Update: 2022-03-22 16:53 IST
'ಜೇಮ್ಸ್' ಚಿತ್ರದ ಪೋಸ್ಟರ್

ಬೆಂಗಳೂರು: ದಿವಂಗತ ನಟ  ಪುನೀತ್‌ ರಾಜ್‌ಕುಮಾರ್‌ ಅವರ ಕೊನೆಯ ಚಿತ್ರ 'ಜೇಮ್ಸ್‌' ಥಿಯೇಟರ್ ನಿಂದ ತೆಗೆದು ವಿವಾದಿತ ಹಿಂದಿ ಚಿತ್ರ  ‘ಕಾಶ್ಮೀರ್‌ ಫೈಲ್ಸ್‌’ ಅನ್ನು ತೋರಿಸುವಂತೆ ಕೆಲವರು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ನಟನೆಯ  ‘ಜೇಮ್ಸ್‌’ ಸಿನೆಮಾ ಮಾ.17ರಂದು ತೆರೆ ಕಂಡಿದ್ದು,  ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಾ.17ರಂದು ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬ ದಿನವೂ ಆಗಿದ್ದರಿಂದ ಅಪ್ಪು ಅಭಿಮಾನಿಗಳು ರಾಜ್ಯಾದಾದ್ಯಂತ 'ಜೇಮ್ಸ್' ಜಾತ್ರೆಯನ್ನೇ ಮಾಡಿದ್ದರು. 

ಈ ನಡುವೆ ಜೇಮ್ಸ್​ ಚಿತ್ರ ತೆಗೆಯುವಂತೆ ಕೆಲವು ಅನಾಮಿಕರು ಥಿಯೇಟರ್​ ಮಾಲಕರಿಗೆ ಒತ್ತಡ ಹೇರುತ್ತಿದ್ದು,  ಥಿಯೇಟರ್​ಗಳಿಂದ ಜೇಮ್ಸ್ ತೆಗೆದು, ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ಹಾಕುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ‘ಜೇಮ್ಸ್‌’ ಸಿನೆಮಾ ನಿರ್ಮಾಪಕ ಹಾಗೂ ಹಂಚಿಕೆದಾರರೂ ಆಗಿರುವ ಕಿಶೋರ್ ಪತ್ತಿಕೊಂಡ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ:  ಪುನೀತ್ ಅವರ ಚಿತ್ರ ತೆಗೆದು ‘ಕಾಶ್ಮೀರ್ ಫೈಲ್ಸ್’ ತೋರಿಸುವಂತೆ ಒತ್ತಡ ಹಾಕೋದು ಸರಿಯಲ್ಲ: ಸಿದ್ದರಾಮಯ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News