ಶಿಕ್ಷಕರ ನೇಮಕಾತಿ: ಕಲ್ಯಾಣ ಕರ್ನಾಟಕಕ್ಕೆ 557 ಹುದ್ದೆಗಳನ್ನು ಹೆಚ್ಚಿಸಿ ಆದೇಶ

Update: 2022-03-22 15:30 GMT

ಬೆಂಗಳೂರು, ಮಾ.22: ಶಿಕ್ಷಣ ಇಲಾಖೆಯು ಹೊರಡಿಸಿರುವ 15,000 ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರ ಅನ್ವಯಿಸುವಂತೆ ಆಂಗ್ಲಭಾಷಾ ಶಿಕ್ಷಕ ಹುದ್ದೆಗಳನ್ನು 557ಕ್ಕೆ ಹೆಚ್ಚಿಸಲಾಗಿದೆ. 

ಈ ಮೊದಲ ಆದೇಶದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ವಯಿಸುವಂತೆ ಆಂಗ್ಲಭಾಷಾಗೆ 250 ಹುದ್ದೆಗಳನ್ನು ಮೀಸಲಿರಿಸಲಾಗಿತ್ತು. ಈ ಹುದ್ದೆಗಳನ್ನು 557ಕ್ಕೆ ಹೆಚ್ಚಿಸಿ, ಮಂಗಳವಾರ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News