×
Ad

ಮೈಸೂರು ವಿವಿ ಘಟಿಕೋತ್ಸವ: 7 ಚಿನ್ನದ ಪದಕ ಪಡೆದ ಮಂಗಳೂರಿನ ಲಮೀಯ ಮಜೀದ್

Update: 2022-03-22 21:41 IST

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 102 ನೇ ವಾರ್ಷಿಕ  ಘಟಿಕೋತ್ಸವ ನಗರದ ಕ್ರಾಫರ್ಡ್ ಹಾಲ್ ನಲ್ಲಿ  ಮಂಗಳವಾರ ನಡೆಯಿತು.

ಮೂಲತಃ ಮಂಗಳೂರಿನವರಾದ ಲಮೀಯ ಮಜೀದ್ ಎಂಎಸ್ಸಿ ಬಾಟನಿ ವಿಭಾಗದಲ್ಲಿ 7 ಚಿನ್ನ ಮೂರು ನಗದು ಪಡೆದಿದ್ದಾರೆ.

ರಾಜ್ಯಪಾಲ ಹಾಗೂ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವ ಉದ್ಘಾಟಿಸಿದರು. ಮಂಗಳೂರಿನವರಾದ ಲಮೀಯ ಮಜೀದ್  ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ ಎಸ್ಸಿ ಸ್ನಾತಕೋತ್ತರ ಪದವಿ ಪಡೆದು ಸಂತಸ ಪಟ್ಟಿದ್ದಾರೆ.

ಇದೇ ವೇಳೆ ಒಟ್ಟು 28581 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಇದರಲ್ಲಿ 64.96%  ಮಹಿಳಾ ಅಭ್ಯರ್ಥಿಗಳು 35% ಪುರುಷ ಅಭ್ಯರ್ಥಿಗಳು ಪದವಿಗೆ ಭಾಜನರಾದರು.

ಒಟ್ಟು 213 ಅಭ್ಯರ್ಥಿಗಳು ಒಟ್ಟು 376 ಪದಕ ಮತ್ತು 216 ಬಹುಮಾನ ಪಡೆದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News