ಥಿಯೇಟರ್ ಗಳಿಂದ 'ಜೇಮ್ಸ್' ಚಿತ್ರ ತೆಗೆಯುವಂತೆ ಒತ್ತಡ: ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-03-23 14:39 GMT

ಬೆಂಗಳೂರು, ಮಾರ್ಚ್ 23: ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್' ಸಿನೆಮಾ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  'ಜೇಮ್ಸ್ ಸಿನೆಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಪಡಿಸಲು ಅವಕಾಶ ನೀಡುವುದಿಲ್ಲ' ಎಂದು  ತಿಳಿಸಿದರು. 

"ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯವರೊಂದಿಗೆ ಮಾತನಾಡಿದ್ದೇನೆ.  ತೊಂದರೆಯಾಗಿರುವಲ್ಲಿ ಕೂಡಲೇ ಸರಿಪಡಿಸಿ, ಅನಾವಶ್ಯಕವಾಗಿ ಜೇಮ್ಸ್ ಸಿನೆಮಾವನ್ನು ಯಾರೂ ಚಿತ್ರಮಂದಿರಗಳಿಂದ ತೆಗೆಯತಕ್ಕದ್ದಲ್ಲ. ಸಂಬಂಧಪಟ್ಟ ನಿರ್ಮಾಪಕರು, ಚಿತ್ರಮಂದಿರದವರಿಗೆ ಇದನ್ನು ಸರಿಪಡಿಸುವ ಅಧಿಕಾರವಿದೆ. ನಟ ಶಿವರಾಜ್ ಕುಮಾರ್ ಅವರ ಬಳಿಯೂ ಮಾತನಾಡಿದ್ದೇನೆ. ತೊಂದರೆ ಇದ್ದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಥವಾ ನನ್ನ ಗಮನಕ್ಕೆ ತರಬೇಕೆಂದು ತಿಳಿಸಿದ್ದೇನೆ.  ಅವರೂ ಸಹ  ಒಪ್ಪಿದ್ದಾರೆ. ಕಾಂಗ್ರೆಸ್ ನವರು ಸಿನಿಮಾದಲ್ಲಿಯೂ ರಾಜಕಾರಣ ಮಾಡುವಷ್ಟು ಕೆಳಮಟ್ಟಕ್ಕೆ ಹೋಗಿದ್ದಾರೆ"  ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News