ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ ಒತ್ತು: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: 'ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳ ಅಭಿವೃದ್ಧಿಯನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯಲ್ಲಿ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, 'ಇದಕ್ಕಾಗಿ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ವಿಶೇಷ ಅನುದಾನ ನೀಡಲಾಗಿದೆ,' ಎಂದು ತಿಳಿಸಿದರು.
''ಯಾವೆಲ್ಲ ಪ್ರದೇಶಗಳನ್ನು ಕೊಳೆಗೇರಿಗಳೆಂದು ಗುರುತಿಸಬೇಕು ಎಂಬ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿರುವ ಪ್ರದೇಶ ಅಭಿವೃದ್ಧಿಪಡಿಸ ಲಾಗುವುದು. ಎರಡನೇ ಹಂತದಲ್ಲಿ ಅಲ್ಪ ಸಂಖ್ಯಾತರು ಮತ್ತು ಇತರೆ ಸಮುದಾಯದವರು ನೆಲೆಸಿರುವ ಪ್ರದೇಶ ಅಭಿವೃದ್ಧಿಪಡಿಸಲಾಗುವುದು,'' ಎಂದು ಹೇಳಿದರು.
''ಕೇಂದ್ರ ನೀಡುವ ಅನುದಾನವನ್ನು ಶಾಸಕರೊಂದಿಗೆ ಬೆಂಗಳೂರು ಸೇರಿದಂತೆ 11 ಮಹಾನಗರ ಪಾಲಿಕೆಗಳ ವ್ಯಾಪ್ತಿ ಯಲ್ಲಷ್ಟೇ ಬಳಸಲು ಅವಕಾಶವಿದೆ. ಹಾಗಾಗಿ ಅಲ್ಪಸಂಖ್ಯಾತರು ವಾಸ ವಿರುವ ಇತರೆ ಪ್ರದೇಶ ಗಳ ಅಭಿವೃದ್ಧಿಯನ್ನು ಸಂ ಕೊಳೆಗೇರಿ ಅಭಿವೃದ್ಧಿ ಉ ಕೈಗೊಳ್ಳಲಾಗುವುದು. ಕಳೆದ ವರ್ಷ ಮಂಗಳೂ ರಿನಲ್ಲಿ ಅಲ್ಪಸಂಖ್ಯಾತರು ವಾಸವಿರುವ ಪ್ರದೇಶಗಳ ಅಭಿವೃದ್ಧಿಗೆ ಸರ ಸುಮಾರು 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.'' ಎಂದು ತಿಳಿಸಿದರು.