ಕರ್ನಾಟಕ ಧನವಿನಿಯೋಗ ವಿಧೇಯಕ: 26,953.33 ಕೋಟಿ ರೂ.ಗಳ ಪೂರಕ ಅಂದಾಜಿಗೆ ಒಪ್ಪಿಗೆ

Update: 2022-03-24 17:24 GMT

ಬೆಂಗಳೂರು, ಮಾ.24: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2021-22ನೆ ಸಾಲಿನ ಪೂರಕ ಅಂದಾಜುಗಳ 26,953.33 ಕೋಟಿ ರೂ.ಗಳ ಮೂರನೆ ಕಂತಿನ 2022ನೆ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕಕ್ಕೆ ಗುರುವಾರ ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿತು.

ಈ 26953.33 ಕೋಟಿ ರೂ.ಗಳಲ್ಲಿ 2.19 ಕೋಟಿ ರೂ. ಪ್ರಭುತ್ವ ವೆಚ್ಚ ಮತ್ತು 26951.14 ಕೋಟಿ ರೂ.ಗಳು ಪುರಸ್ಕøತ ವೆಚ್ಚ ಸೇರಿರುತ್ತದೆ. ಇದರಲ್ಲಿ 996.03 ಕೋಟಿ ರೂ.ಗಳು ಸಹ ಪುರಸ್ಕøತವಾಗಬೇಕಾಗಿದ್ದು, ಇದನ್ನು ರಿಸರ್ವ್ ಫಂಡ್ ಠೇವಣಿಗಳಿಂದ ಭರಿಸಲಾಗುತ್ತದೆ.

ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 25957.30 ಕೋಟಿ ರೂ.ಗಳು. ಇದರಲ್ಲಿ 2631.28 ಕೋಟಿ ರೂ.ಗಳು ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ. ಆದುದರಿಂದ, ಹೊರ ಹೋಗುವ ನಿವ್ವಳ ನಗದು ಮೊತ್ತ 23326.02 ಕೋಟಿ ರೂ.ಗಳಾಗಿರುತ್ತದೆ.

ಇದನ್ನು ವೆಚ್ಚದ ಸೂಕ್ತ ಪರಿಷ್ಕøತ ಆದ್ಯತೆ, ಹೆಚ್ಚುವರಿ ಸ್ವೀಕೃತವಾದ ತೆರಿಗೆ ಪಾಲು, ಹೆಚ್ಚುವರಿ ರಾಜಸ್ವ ಸ್ವೀಕೃತಿ ಸಂಗ್ರಹಣೆ ಮತ್ತು ಭಾರತ ಸರಕಾರದಿಂದ ಹೆಚ್ಚುವರಿ ಜಿಎಸ್ಟಿ ಪರಿಹಾರ ಸಾಲ ಸೇರಿದಂತೆ ಹೆಚ್ಚುವರಿ ಜಿಎಸ್ಟಿ ಪರಿಹಾರದಿಂದ ಭರಿಸಲಾಗುವುದು.

2020-21ರಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಒಟ್ಟಾರೆ ಸಂಪನ್ಮೂಲ ಕ್ರೋಡೀಕರಣದಲ್ಲಿ 21,835 ಕೋಟಿ ರೂ.ಕುಸಿತವಾಗಿತ್ತು. 2021-22ನೆ ಸಾಲಿನಲ್ಲಿ 12,708 ಕೋಟಿ ರೂ.ಗಳ ಜಿಎಸ್ಟಿ ಪರಿಹಾರವನ್ನು ಅಂದಾಜು ಮಾಡಲಾಗಿದ್ದು, ಈ ಅವಧಿಯಲ್ಲಿ ಸಂಗ್ರಹಣೆ ಸೆಸ್ ಮೂಲಕ ಭಾರತ ಸರಕಾರವು 8976 ಕೋಟಿ ರೂ.ಗಳ ಪರಿಹಾರವನ್ನು ಬಿಡುಗಡೆ ಮಾಡಿದೆ. 

ಸಾಂಕ್ರಾಮಿಕ ರೋಗದಿಂದಾಗಿ ಉಂಟಾದ ರಾಜ್ಯಗಳ ಹಣಕಾಸಿನ ಮೇಲಿನ ಒತ್ತಡವನ್ನು ತಗ್ಗಿಸುವ ಸಲುವಾಗಿ, ಕೇಂದ್ರ ಸರಕಾರವು ಸಾಲವನ್ನು ಎತ್ತುವಳಿ ಮಾಡಿ ಜಿಎಸ್ಟಿ ಪರಿಹಾರದ ಬಾಕಿಗಳಿಗೆ ಬದಲಾಗಿ ಜಿಎಸ್ಟಿ ಪರಿಹಾರದ ಸಾಲವಾಗಿ 2021-22ನೆ ಸಾಲಿಗೆ 18,109 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಹಾಗಾಗಿ, ರಾಜ್ಯವು 2021-22ನೆ ಸಾಲಿಗೆ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಾಗಿ ಜಿಎಸ್ಟಿ ಪರಿಹಾರ ಮತ್ತು ಪರಿಹಾರ ಸಾಲದ ಮೂಲಕ ಒಟ್ಟು 27085 ಕೋಟಿ ರೂ.ಗಳನ್ನು ಸ್ವೀಕರಿಸಿದ್ದು, 14377 ಕೋಟಿ ರೂ.ನಿವ್ವಳ ಹೆಚ್ಚಳವಾಗಿದೆ.

ಕೇಂದ್ರ ಸರಕಾರವು 2022ರ ಫೆಬ್ರವರಿಯಲ್ಲಿ ಮಂಡಿಸಿದ ಪರಿಷ್ಕøತ ಅಂದಾಜಿನಲ್ಲಿ ಹಿಂದೆ ಅಂದಾಜು ಮಾಡಿದ ತೆರಿಗೆ ಪಾಲು 24273 ಕೋಟಿ ರೂ.ಗಳನ್ನು 27145 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಆ ಮೂಲಕ ಆಯವ್ಯಯ ಅಂದಾಜಿಗಿಂತ 2872 ಕೋಟಿ ರೂ.ಹೆಚ್ಚು ಬಿಡುಗಡೆ ಮಾಡಿದೆ. ಅದೇ ರೀತಿ ವಿವಿಧ ಕೇಂದ್ರ ಯೋಜನೆಗಳು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ನೀಡಲಾದ ಸಹಾಯಾನುದಾನ ಅಂದಾಜು ಮಾಡಿದ 15538 ಕೋಟಿ ರೂ.ಗಳಿಗಿಂತ 2203 ಕೋಟಿ ರೂ.ಗಳಷ್ಟು ಹೆಚ್ಚಿಗೆ ಸ್ವೀಕೃತವಾಗಿದೆ.

2021-22ರ ಆರ್ಥಿಕ ವರ್ಷದಲ್ಲಿ ಅಂದಾಜು ಮಾಡಿದ ರಾಜ್ಯದ ಸ್ವಂತ ರಾಜಸ್ವ ಸ್ವೀಕೃತಿ 1,19,752 ಕೋಟಿ ರೂ.ಗಳಾಗಿದ್ದು, 1,27,143 ಕೋಟಿ ರೂ.ಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News