VIDEO ನೋಡಿ- ಹುಟ್ಟೂರಿನ ಜಾತ್ರೆಯಲ್ಲಿ ಸಂಗಡಿಗರೊಂದಿಗೆ ವೀರಕುಣಿತದ ಹೆಜ್ಜೆ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ
Update: 2022-03-25 11:59 IST
ಮೈಸೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ರಾತ್ರಿ ಸ್ವಗ್ರಾಮ ಮೈಸೂರು ತಾಲೂಕು ಸಿದ್ದರಾಮನಹುಂಡಿಗೆ ಭೇಟಿ ನೀಡಿ ಅವರ ಮನೆದೇವರು ಸಿದ್ದರಾಮೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮೂರು ದಿನಗಳ ಕಾಲ ನಡೆಯುವ ಸಿದ್ದರಾಮೇಶ್ವರ ಮತ್ತು ಚಿಕ್ಕಮ್ಮ ತಾಯಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಿದ್ದರಾಮಯ್ಯ ಇದೇ ವೇಳೆ ತನ್ನ ಸಂಗಡಿಗರೊಂದಿಗೆ ವೀರಕುಣಿತದ ಹೆಜ್ಜೆ ಹಾಕಿದರು.
ತಮ್ಮ ನಾಯಕನ ಆಗಮನದಿಂದ ಸಂತೋಷಗೊಂಡ ಗ್ರಾಮಸ್ಥರು ತಮಟೆ, ಡೊಳ್ಳು, ವೀರನ ಕುಣಿತದೊಂದಿಗೆ ಭವ್ಯ ಸ್ವಾಗತ ನೀಡಿದರು.