×
Ad

ಏಕ ಕಾಲದಲ್ಲಿ 'ಆರೆಸ್ಸೆಸ್ ಮತ್ತು ದೇಶಪ್ರೇಮಿ' ಆಗಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

Update: 2022-03-25 13:53 IST

ಬೆಂಗಳೂರು: ಏಕ ಕಾಲದಲ್ಲಿ 'ಆರೆಸ್ಸೆಸ್ ಮತ್ತು ದೇಶಪ್ರೇಮಿ' ಆಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಪ್ರಿಯಾಂಕ್ ಖರ್ಗೆ ಅವರ ಟ್ವೀಟ್ ಇಂತಿದೆ...

'ಸಾಂವಿಧಾನಿಕ ಸಭೆಯು ಸಂವಿಧಾನದ ಬಗ್ಗೆ ಚರ್ಚೆಗಳನ್ನು ನಡೆಸುವಾಗ, ಆರೆಸ್ಸೆಸ್ ಸಂವಿಧಾನದ ಪ್ರತಿಗಳನ್ನು ದಹಿಸಿತ್ತು ಹಾಗೂ ಮನುಸ್ಮೃತಿಯನ್ನು ಭಾರತದ ಸಂವಿಧಾವನ್ನಾಗಿ ಮಾಡಬೇಕೆಂದು ಬಯಸಿತ್ತು. ಸಭಾ ಅಧ್ಯಕ್ಷರು ಸಂವಿಧಾನದ ಬಗ್ಗೆ ಚರ್ಚೆಗಳನ್ನು ಮಾಡುತ್ತಾರೆ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದಾಗಿ ಹೇಳುತ್ತಾರೆ. ಅದೇ ವೇಳೆ ಆರೆಸ್ಸೆಸ್ ಅನ್ನು ಹೊಗಳುತ್ತಾರೆ. ಏಕ ಕಾಲದಲ್ಲಿ ಆರೆಸ್ಸೆಸ್ ಮತ್ತು ದೇಶಪ್ರೇಮಿ ಆಗಲು ಸಾಧ್ಯವಿಲ್ಲ'. 

'ಪ್ರಧಾನಿ ಸೇರಿದಂತೆ ಪ್ರಸ್ತುತ ಹಿಂದುತ್ವದ ಐಕಾನ್‌ಗಳ ಗುರು ಎಂಎಸ್ ಗೋಲ್ವಾಲ್ಕರ್,  ಭಾರತೀಯ ಸಂವಿಧಾನವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ನಾನು ಮೊದಲೇ ಹೇಳಿದಂತೆ, ಏಕ ಕಾಲದಲ್ಲಿ ಆರೆಸ್ಸೆಸ್ ಮತ್ತು ದೇಶಭಕ್ತರಾಗಲು ಸಾಧ್ಯವಿಲ್ಲ' ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತನ್ನ ಇನ್ನೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News