ತೆರಿಗೆ ಪಾವತಿಸದ ಐಷಾರಾಮಿ ಕಾರುಗಳಿಂದ ಸರಕಾರಕ್ಕೆ ನಷ್ಟ ಮಾಡುವವರ ವಿರುದ್ಧ ಸಿಐಡಿ ತನಿಖೆ: ಸಚಿವ ಬಿ.ಶ್ರೀರಾಮುಲು
Update: 2022-03-25 17:46 IST
ಬೆಂಗಳೂರು, ಮಾ.25: ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಕೆಲವು ಐಷಾರಾಮಿ ಕಾರುಗಳಿಗೆ ಜೀವಿತಾವಧಿ ತೆರಿಗೆ ಪಾವತಿಸದೆ ನೋಂದಣಿ ಮಾಡಿಕೊಂಡು ಸರಕಾರಕ್ಕೆ ತೆರಿಗೆ ನಷ್ಟ ಮಾಡುವವರ ವಿರುದ್ಧ ಸಿಐಡಿ ತನಿಖೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಶುಕ್ರವಾರ ವಿಧಾನ ಪರಿಷತ್ ಕಲಾಪದಲ್ಲಿ ಅವರು, 2015 ರಿಂದ ಇಲ್ಲಿಯವರೆಗೂ 124 ಐಷಾರಾಮಿ ವಾಹನಗಳು ಜೀವಿತಾವಧಿ ತೆರಿಗೆ ಪಾವತಿಸದೆ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಾಣಿ ಆದ ವಾಹನಗಳ ದಾಖಲಾತಿ ಕಾಣೆಯಾಗಿವೆ. ಇದರಿಂದಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕಷ್ಟ ಸಾಧ್ಯವಾಗಿದೆ ಎಂದು ಹೇಳಿದರು.
ತೆರಿಗೆ ವಂಚನೆ ಸಂಬಂಧ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಅಥವಾ ಸಿಐಡಿಯಿಂದ ತನಿಖೆ ನಡೆಸಬೇಕು ಎಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಕಟಿಸುವುದಾಗಿ ಹೇಳಿದರು.