ಕೊಡಗು: ಹಿಂದೂಯೇತರರ ಅಂಗಡಿಗಳನ್ನು ತೆರವುಗೊಳಿಸಿದ ಸಂಘಪರಿವಾರದ ಕಾರ್ಯಕರ್ತರು

Update: 2022-03-25 18:18 GMT

ಶನಿವಾರಸಂತೆ, ಮಾ.25: ಸಮ್ಮೇಳನವೊಂದರಲ್ಲಿ ವ್ಯಾಪಾರ ನಡೆಸುತ್ತಿದ್ದ ಹಿಂದೂಯೇತರರ ಅಂಗಡಿಗಳನ್ನು ಸಂಘಪರಿವಾರದ ಕಾರ್ಯಕರ್ತರು ತೆರವುಗೊಳಿಸಿರುವ ಬಗ್ಗೆ ವರದಿಯಾಗಿದೆ. 

ಬಿಲ್ವ ಗೋಶಾಲೆ ದಶಮಾನೋತ್ಸವ ಪ್ರಯುಕ್ತ ಸೋಮವಾರಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದ  ತಪೋಕ್ಷೇತ್ರ ಮನೆಹಳ್ಳಿಯಲ್ಲಿ ಶುಕ್ರವಾರ ನಡೆದ ಸಾವಯವ ಕೃಷಿ ಮತ್ತು ಕುಲ ಗೋವುಗಳ ಸಮ್ಮೇಳನದ ಸಂದರ್ಭ ರಸ್ತೆ ಬದಿ ಹಾಗೂ ಮೈದಾನದಲ್ಲಿ ಹಾಕಿದ್ದ ಮುಸ್ಲಿಂ ಸಮುದಾಯದ ವರ್ತಕರ ಕೆಲವೊಂದು ಅಂಗಡಿಗಳನ್ನು  ಸಂಘಪರಿವಾರದ ಕಾರ್ಯಕರ್ತರು ತೆರವುಗೊಳಿಸಿದ್ದಾರೆ ಎನ್ನಲಾಗಿದೆ. 

ಇದಲ್ಲದೇ 'ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಳ್ಳದವರಿಗೆ ಹಿಂದೂಗಳು ನಡೆಸುವ ಜಾತ್ರೆಯ ವೇಳೆ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ'  ಎಂದು ನಿಂದಿಸಿದ್ದು, ಕೆಲವೊಂದು ಕಬ್ಬು ಮತ್ತು ಕಲ್ಲಂಗಡಿ ಜ್ಯೂಸ್ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News