ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯದಿಂದ ಕೈಬಿಡುವ ವಿಚಾರ: ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರತಿಕ್ರಿಯೆ

Update: 2022-03-25 17:11 GMT
ಬಿ.ಸಿ ನಾಗೇಶ್

ಬೆಂಗಳೂರು:  ಪಠ್ಯದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಕತ್ತರಿ ಹಾಕಲಾಗುತ್ತದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಕುರಿತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,  'ಟಿಪ್ಪು ಇತಿಹಾಸ ಪಠ್ಯದಿಂದ ಕೈಬಿಡುವ ಸುದ್ದಿ ಸತ್ಯಕ್ಕೆ ದೂರ. ಇತಿಹಾಸದ ಕೆಲ ವಿಚಾರಗಳು ಪಠ್ಯ ಪುಸ್ತಕದಲ್ಲಿ ಕಡೆಗಣನೆ ಮಾಡಲಾಗಿತ್ತು. ಕಡೆಗಣಿಸಿದ ವಿಷಯವನ್ನು ಪರಿಚಯಿಸಲು ಪ್ರಯತ್ನಿಸ್ತಿದ್ದೇವೆ' ಎಂದು ಹೇಳಿದ್ದಾರೆ.

'ಇತಿಹಾಸವನ್ನು ತಿರುಚಲು ಯತ್ನಿಸಿದ್ದನ್ನಷ್ಟೇ ಸರಿಪಡಿಸುತ್ತೇವೆ. ಪಠ್ಯದಲ್ಲಿ ಯಾವುದೇ ರಾಜಕೀಯ ಬೆರೆಸುವ ಕೆಲಸ ಮಾಡಿಲ್ಲ' ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News