ಮೂರು ವರ್ಷದಲ್ಲಿ 232 ಕೈಗಾರಿಕೆಗಳಿಗೆ ಹಂಚಿಕೆ: ಸಚಿವ ನಿರಾಣಿ

Update: 2022-03-25 18:04 GMT

ಬೆಂಗಳೂರು,ಮಾ, 25: ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ವತಿಯಿಂದ ಮೈಸೂರು ಜಿಲ್ಲೆ ಅಡಕನಹಳ್ಳಿ ಹಾಗೂ ತಾಂಡ್ಯ 2ನೇ ಹಂತದ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನುಗಳ ಪೈಕಿ ಮೂರು ವರ್ಷದಲ್ಲಿ 232 ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗಿದೆ' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪರವಾಗಿ ಶರತ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸೂಕ್ಷ್ಮ, ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗೆ ಗುತ್ತಿಗೆ ಕರಾರು ನೆರವೇರಿಸಲಾದ ದಿನಾಂಕದಿಂದ 3ವರ್ಷ ಹಾಗೂ ಮೆಗಾ, ಅಲ್ಟ್ರಾ ಮೆಗಾ, ಸೂಪರ್ ಮೆಗಾ ಕೈಗಾರಿಕೆಗಳಿಗೆ ಗುತ್ತಿಗೆ ಕರಾರು ನೆರವೇರಿಸಿದ ದಿನಾಂಕದಿಂದ 5 ವರ್ಷದೊಳಗೆ ಯೋಜನೆ ಅನುಷ್ಠಾನಗೊಳಿಸಬೇಕೆಂಬ ಷರತ್ತು ವಿಧಿಸಲಾಗಿದೆ ಎಂದು ಹೇಳಿದರು. 

ಭೂಮಿ ಕಳೆದುಕೊಂಡ 15 ರೈತರಿಗೆ ಉದ್ಯೋಗ ದೊರೆತಿದೆ. ಇತರೆ ಕಾರ್ಖಾನೆಗಳಿಗೂ ಹೋಗಲು ಸಿದ್ಧರಿದ್ದರೆ ಉದ್ಯೋಗ ಕೊಡಿಸಲಾಗುವುದು. ಭೂಮಿ ಕಳೆದುಕೊಂಡು ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದು ಮುರುಗೇಶ್ ನಿರಾಣಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News