×
Ad

ನಾನು ಹೇಳಿದಷ್ಟು ತೋರಿಸಿ, ಇಲ್ಲದಿದ್ದರೆ ಸುಮ್ಮನಿರಿ: ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ

Update: 2022-03-26 16:38 IST

ಮೈಸೂರು,ಮಾ.26: 'ನಮ್ಮ ಹೆಣ್ಣು ಮಕ್ಕಳು ಕೂಡ ದುಪ್ಪಟ್ಟಾ  ಹಾಕುತ್ತಾರೆ ಎಂದಿದ್ದೆ. ನಾನು ಹೇಳಿದಷ್ಟು ತೋರಿಸಿ, ಇಲ್ಲದಿದ್ದರೆ ಸುಮ್ಮನಿರಿ. ನಾನು ಏನೂ ಹೋಲಿಕೆ ಮಾಡಿಲ್ಲ. ಹಿಜಾಬ್ ಪ್ರಸ್ತಾಪವನ್ನೇ ಮಾಡಿಲ್ಲ. ಅಸೆಂಬ್ಲಿಯಲ್ಲಿ ಕೂಡ ದುಪ್ಪಟ್ಟಾ ಹಾಕೋದಕ್ಕೆ ಅವಕಾಶ ಮಾಡಿಕೊಡಿ ಅಂತ ಹೇಳಿದ್ದೆ ಅಷ್ಟೇ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ನಗರದ ಟಿ.ಕೆ.ಲೇಔಟ್‍ನಲ್ಲಿರುವ ಅವರ ಮನೆಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾನಾಡಿದರು.  

ಯಾವತ್ತೂ ಕೂಡ ಸ್ವಾಮೀಜಿಗಳಿಗೆ ಅಗೌರವವಾಗಿ ನಡೆದುಕೊಂಡಿರುವ ನಿದರ್ಶನ ಇಲ್ಲ. ಅವರ ಜೊತೆ ಸಂಬಂಧ ಮೊದಲಿನಿಂದಲೂ ಚೆನ್ನಾಗಿದೆ.ಸ್ವಾಮೀಜಿಗಳಿಗೆ ಯಾವತ್ತೂ ಗೌರವ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಪ್ರಶ್ನೆನೂ ನೀವೇ ಕೇಳುತ್ತೀರಿ, ವಿವಾದವನ್ನು ನೀವೇ ಮಾಡುತ್ತೀರಿ. ಸ್ಪಷ್ಟವಾಗಿ  ಹೇಳುತ್ತೇನೆ ಸ್ವಾಮೀಜಿ ಗಳ ಬಗ್ಗೆ ಅಪಾರವಾದ ಗೌರವ ವಿದೆ. ಈಗಲೂ ಇದೆ ಮುಂದೆಯೂ ಇರತ್ತೆ,  ನಾನು ಅಪಾರ ಮಠಗಳಿಗೆಲ್ಲ ಹೋಗಿದ್ದೆ. ಸ್ವಾಮೀಜಿಗಳನ್ನು ಗೌರವದಿಂದ ಕಾಣುತ್ತೇನೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News