×
Ad

ಅಗತ್ಯ ಔಷಧಿಗಳ ಬೆಲೆಯಲ್ಲಿ ಶೇ.10ರಷ್ಟು ಹೆಚ್ಚಳ: ಸರ್ಕಾರದಿಂದ ಮತ್ತೊಂದು 'ಸರ್ಜಿಕಲ್‌ ಸ್ಟ್ರೈಕ್' ಎಂದ ಸಿದ್ದರಾಮಯ್ಯ

Update: 2022-03-26 18:22 IST

ಹೊಸದಿಲ್ಲಿ: ಎಪ್ರಿಲ್‌ 1ರಿಂದ ಸೋಂಕು ಹಾಗೂ ನೋವು ನಿವಾರಕಗಳು ಸೇರಿದಂತೆ ಸುಮಾರು 800 ಕ್ಕೂ ಅಧಿಕ ಅಗತ್ಯ ಔಷಧಿಗಳ ಬೆಲೆ ಏರಲಿದೆ ಎಂದು ವರದಿಯಾರುವ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 

ಈ ಸಂಬಂಧ ಶನಿವಾರ ಟ್ವೀಟ್ ಮಾಡಿರುವ ಅವರು,  'ಹಣದುಬ್ಬರ ಮತ್ತು ಹೆಚ್ಚಿನ ಇಂಧನ ಬೆಲೆಗಳಿಂದ ದೇಶವು ಹೊರೆಯಾಗಿರುವ ಸಮಯದಲ್ಲಿ, ಅಗತ್ಯ ಔಷಧಿಗಳ ಬೆಲೆಯನ್ನು 10% ಕ್ಕಿಂತ ಹೆಚ್ಚು ಹೆಚ್ಚಿಸುವ ಮೂಲಕ ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ನರೇಂದ್ರ ಮೋದಿ ಸರ್ಕಾರ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಾರಂಭಿಸಿದೆ' ಎಂದು  ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. 

ಇದನ್ನೂ ಓದಿ: ಎ.1ರಿಂದ ಪ್ಯಾರಾಸಿಟಮಲ್‌ ಸೇರಿದಂತೆ 800ಕ್ಕೂ ಅಧಿಕ ಅಗತ್ಯ ಔಷಧಿಗಳ ಬೆಲೆಯಲ್ಲಿ ಶೇ 10.7 ರಷ್ಟು ಹೆಚ್ಚಳ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News