ಹಿಂದೂಯೇತರರ ವ್ಯಾಪರಕ್ಕೆ ನಿರ್ಬಂಧ ವಿಚಾರ: ಹಾಸನದಲ್ಲಿ ಮಾನವಪರ ಸಂಘಟನರಗಳಿಂದ ದುಂಡು ಮೇಜಿನ ಸಭೆ

Update: 2022-03-26 17:12 GMT

ಹಾಸನ: ಮಾ. 26.  ಇತ್ತೀಚೆಗೆ ಹಿಂದೂ ದೇವಾಲಯಗಳ ಅಕ್ಕ-ಪಕ್ಕದಲ್ಲಿ  ಮುಸ್ಲಿಮರು ಅಂಗಡಿ ಹಾಕಿ ವ್ಯಾಪಾರ ಮಾಡುವುದನ್ನು ನಿರ್ಬಂಧಿಸಿರುವುದರ ಬಗ್ಗೆ ಹಾಸನ ನಗರದ ಮಾನವ ಬಂಧುತ್ವ ವೇದಿಕೆ ಕಚೇರಿಯಲ್ಲಿ ಜನಪರ ಸಂಘಟನೆ ವತಿಯಿಂದ ದುಂಡುಮೇಜಿನ ಸಭೆ ನಡೆಯಿತು.

ಸಭೆಯಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಜನಪರ ಹೋರಾಟಗಾರ ಧರ್ಮೇಶ್,  ಗಾಂಧಿ, ಅಂಬೇಡ್ಕರ್, ಬುದ್ದ, ಕಬೀರ್, ಶಿಶುನಾಳ ಶರೀಫರು.  ಈ ನಾಡಿನಲ್ಲಿ ಹುಟ್ಟಿ ಜಗತ್ತಿದೆ ಬೆಳಕಾದವರು. ಆದರೆ, ಅದೇ ನಾಡಿನಲ್ಲಿ ಶಾಂತಿ‌, ಸೌಹಾರ್ದತೆ, ಕೋಮು ಸಾಮರಸ್ಯ ಕದಡುವ ವ್ಯವಸ್ಥಿತ ಕೆಲಸ ನಡೆಯುತ್ತಿದೆ.ಎಂದರು.

ಇತಿಹಾಸವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. 2014 ರ ನಂತರದ ರಾಜಕೀಯ ಬೆಳವಣಿಗೆಗಳು ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರ ನಡುವೆ ಆತಂಕ ಸೃಷ್ಟಿಸಲಾಗುತ್ತಿದೆ. ಸಿಎಎ, ಎನ್.ಆರ್.ಸಿ, ಎನ್.ಪಿ.ಆರ್, ಜಾರಿಗೆ ಮುಂದಾಗಿದ್ದು, ಜಮ್ಮೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ನ್ನು ರದ್ದುಗೊಳಿಸಿದ್ದು, ಇತ್ತೀಚಿನ ಹಿಜಾಬ್ ಪ್ರಕರಣ, ಕಾಶ್ಮೀರಿ ಫೈಲ್ಸ್ ಸಿನೆಮಾ ಇವೆಲ್ಲವೂ ಸಂವಿಧಾನದ ಆಶಯಗಳಿಗ್ಗೆ ತಿಲಾಂಜಲಿ ಇಡುವ ಬೆಳವಣಿಗೆಗಳಾಗಿವೆ ಎಂದರು.

ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಅಲ್ಪ ಸಂಖ್ಯಾತರ ಪರವಾಗಿ‌ ಎಲ್ಲಾ ಜಾತ್ಯಾತೀತ ಶಕ್ತಿಗಳು ಒಟ್ಟಾಗಿ ನಿಲ್ಲಬೇಕು. ಎಂದಿನಂತೆ ಅಲ್ಪ ಸಂಖ್ಯಾತರಿಗೂ ಜಾತ್ರೆ, ಉತ್ಸವಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. 

ಹಾಸನದ ಹಾಸನಾಂಬ ದೇವಸ್ಥಾನದ ಬಾಗಿಲನ್ನು ತರರೆಯಲು ಮುಸ್ಲಿಂ ಧರ್ಮಗುರುಗಳು ಬಂದು ಪ್ರಾರ್ಥನೆ ಸಲ್ಲಿಸುವ ಸೌಹಾರ್ದ ಪರಂಪರೆ ಇದೆ ಎಂದರು.

 ದಲಿತ ಸಂಘರ್ಷ ಸಮಿತಿ ಮುಖಂಡ ಸೋಮಶೇಖರ್  ಮಾತನಾಡಿ, ಅಲ್ಪಸಂಖ್ಯಾರನ್ನು ಕೇಂದ್ರೀಕರಿಸಿ ದಾಳಿ ದಬ್ಬಾಳಿಕೆಗಳನ್ನು ನೇಡೆಸಲಾಗುತ್ತಿದೆ, ಮುಂದೆ ದಲಿತರನ್ನು ಕೇಂದ್ರೀಕರಿಸಲಾಗುತ್ತದೆ. ಇವರಿಬ್ಬರನ್ನು ಮುಗಿಸಿದ ಮೇಲೆ ನೇರವಾಗಿ ಸಂವಿಧಾನದ ಮೇಲೆನ ದಾಳಿ‌ ಆರಂಬವಾಗುತ್ತದೆ. ವ್ಯಾಪಾರ ಮಾಡಿ ಬದುಕುಸಾಗುರುತ್ತಿದ್ದ ಬಡ ಮುಸ್ಲಿಮರನ್ನ ಉತ್ಸವಗಳಲ್ಲಿ‌ವ್ಯಾಪಾರ ಮಾಡಬೇಡಿ‌ ಎಂದರೆ ಅವರು ಎಲ್ಲಿಗೆ ಹೋಗಬೇಕು, ಬದುಕನ್ನು ಹೇಗೆ‌ ನಡೆಸಬೇಕು.

ಹಿರಿಯ  ಪತ್ರಕರ್ತ ಆರ್.ಪಿ.ವೆಂಕಟೇಶ್ ಮೂರ್ತಿ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಕೋಮುವಾದಿಗಳು ತಮ್ಮ ಕರಾಳ ಹಸ್ತವನ್ನು ಚಾಚುತ್ತಿವೆ. ಪತ್ರಿಕೋದ್ಯಮ, ಶಿಕ್ಷಣ, ರಕ್ಷಣಾ ಇಲಾಖೆಗಳಲ್ಲೂ ಕೋಮುವಾದಿಗಳು ಅಲ್ಪಸಂಖ್ಯಾತರ ಬಗ್ಗೆ ಭಯ ಹುಟ್ಟಿಸಿ ಕೋಮು ದೃವೀಕರಣ ಮಾಡಲು ಪ್ರಯತ್ನಿಸಿ ಅದರಿಂದ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಗಳನ್ನು ಬಿತ್ತಲಾಗುತ್ತಿದೆ, ಇದರಿಂದಲೂ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದರು.

ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಸಮದ್  ಮಾತನಾಡಿ, ಎರಡೂ ಮೂಲಭೂತವಾದಿಗಳೂ ದೇಶಕ್ಕೆ ಅಪಾಯಕಾರಿ, ಇವೆರಡನ್ನು ನಾವು ಬಲವಾಗಿ ಖಂಡಿದಬೇಕು. ಬೇಲೂರಿನಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಕೆಲಸಕ್ಕೆ ಕೈ ಹಾಕಿರುವ ಬಜರಂಗದಳ, ವಿಶ್ವಹಿಂದು ಪರಿಷತ್ತಿನ‌ ಈ ಹುನ್ನಾರಗಳನ್ನು ದಲಿತರು, ಅಲ್ಪಸಂಖ್ಯಾತರರು, ಜಾತ್ಯಾತೀತ ಮತ್ತು ಸಂವಿಧಾನ ಪರ ಮನಸ್ಸಿರುವ ಎಲ್ಲರೂ ಸೇರಿ ಒಟ್ಟಿಗೆ ಎದುರಿಸಬೇಕು.

ಜಿಲ್ಲೆಯಲ್ಲಿ ಮಲೆನಾಡಿನ‌ ಪ್ರದೇಶಗಳಾದ ಸಕಲೇಶಪುರ ಮತ್ತು ಬೇಲೂರು ತಾಲ್ಲೂಕುಗಳಲ್ಲಿ‌ಕೋಮುವಾದಿಗಳ ಕೆಲಸ ಹೆಚ್ಚಾಗಿದ್ದು ಇದರಿಂದ ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೇಲೂರಿನಲ್ಲಿ ಕೋಮುಸಾಮರಸ್ಯಕ್ಕೆ ತನ್ನದೇ ಆದ ಇತಿಹಾಸವಿದ್ದು ಚನ್ನಕೇಶವಸ್ವಾಮಿ ಜಾತ್ರೆಯಲ್ಲಿ ತೇರನ್ನು ಎಳೆಯುವ ಮುನ್ನ ಮುಸ್ಲಿಂ ಧರ್ಮಗುರುಗಳು ಹೋಗಿ ಪ್ರಾರ್ಥನೆ ಸಲ್ಲಿಸುವ ಆಚರಣೆ ತಲೆತಲಾಂತರಗಳಿಂದ ಆಚರಣೆಯಲ್ಲಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು, ಎಚ್ ಕೆ.ಸಂದೇಶ್, ರಾಜಶೇಖರ್, ಕೆ.ಈರಪ್ಪ, ಮುಬಷೀರ್ ಅಹಮದ್, ಎಸ್.ಎನ್ ಮಲ್ಲಪ್ಪ, ಡಿವೈಎಫ್ಐ ಪೃಥ್ವಿ ಎಂ.ಜಿ, ಕೃಷ್ಣದಾಸ್, ಕೆ.ಪಿ.ಆರ್.ಎಸ್ ನವೀನ್ ಕುಮಾರ್,ವೆಂಕಟೇಶ್, ಟಿ.ಆರ್ ವಿಜಯ್ ಕುಮಾರ್, ರಾಜು ಗೊರೂರು, ಮಲೆನಾಡು ಮೆಹಬೂಬ್, ನಾಗರಾಜ ಹೆತ್ತೂರು, ಅಂಬೇಡ್ಕರ್ ಸೇನೆ ಕೆ. ಪ್ರಕಾಶ್, ಜಿ.ಓ ಮಹಂತಪ್ಪ, ಸಮೀರ್ ಖಾನ್, ಅನ್ಸರ್, ರಮೇಶ್ಎ ಸ್.ಎಫ್.ಐ, ಇತರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News