×
Ad

ಶಿವಮೊಗ್ಗ: ಫ್ಲೆಕ್ಸ್ ಹರಿದಿದ್ದಕ್ಕೆ ಚಾಕು ಇರಿತ; ಆರೋಪ

Update: 2022-03-27 22:02 IST

ಶಿವಮೊಗ್ಗ( ಮಾ.27): ಫ್ಲೆಕ್ಸ್ ಹರಿದ್ದಿದ್ದಾರೆ ಎಂಬ ಕಾರಣಕ್ಕೆ ನಾಲ್ವರ ಗುಂಪೊಂದು ಇಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಟ್ಯಾಂಕ್ ಮೊಹಲ್ಲಾದಲ್ಲಿ ನಡೆದಿದೆ.
ರಂಗನಾಥ್ ಎಂಬಾತನಿಗೆ ಚಾಕು ಇರಿಯಲಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ಯಾಂಕ್ ಮೊಹಲ್ಲಾದ ಪಿಎಚ್‍ಸಿ ಬಳಿ ರಂಗನಾಥ್, ಶಿವದರ್ಶನ್ ಎಂಬವರು ನಡೆದುಕೊಂಡು ಹೋಗುವಾಗ ಸುದೀಪ್, ಶರತ್, ಅಕ್ಷತ್, ರಾಹಿಲ್ ಎಂಬವರು ಶಿವದರ್ಶನ್ ಮೇಲೆ ಹಲ್ಲೆ ಮಾಡಿದ್ದಾರೆ. ಜಗಳ ಬಿಡಿಸಲು ಮುಂದಾದ ರಂಗನಾಥ ಅವರಿಗೆ ಸುದೀಪ್ ಎಂಬಾತನು ಚಾಕುವುನಿಂದ ಎಡಪಕ್ಕೆಗೆ ತಿವಿದಿದ್ದಾನೆ ಎಂದು ಆರೋಪಿಸಲಾಗಿದೆ.

ಟ್ಯಾಂಕ್ ಮೊಹಲ್ಲಾದ 9ನೇ ತಿರುವಿನಲ್ಲಿ ಮಾರಿಜಾತ್ರೆಗೆ ಶುಭಾಷಯ ಕೋರಿ ಫ್ಲೆಕ್ಸ್ ಹಾಕಲಾಗಿತ್ತು. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News