ಎಸೆಸೆಲ್ಸಿ ಪರೀಕ್ಷೆ: ರಾಜ್ಯಾದ್ಯಂತ ಮೊದಲ ದಿನ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು

Update: 2022-03-28 13:37 GMT

ಬೆಂಗಳೂರು, ಮಾ.28: ರಾಜ್ಯಾದ್ಯಂತ 2021-22ನೇ ಸಾಲಿನಲ್ಲಿ ಎಸೆಸೆಲ್ಸಿಯ ಪ್ರಥಮ ಭಾಷೆ ವಿಷಯದ ಪರೀಕ್ಷೆಯು ಸೋಮವಾರ ನಡೆಯಿತು. ಮೊದಲ ದಿನವೇ 20,994 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ಎಸೆಸೆಲ್ಸಿಯ ಮೊದಲ ದಿನದ ಪರೀಕ್ಷೆಗೆ 8,69,399 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, 8,48,405 ವಿದ್ಯಾರ್ಥಿಗಳು ಹಾಜರಾಗಿದ್ದರು. 2020-21ನೇ ಸಾಲಿನಲ್ಲಿ 8,19,398 ವಿದ್ಯಾರ್ಥಿಗಳು ದಾಖಲಾಗಿದ್ದು, ಪರೀಕ್ಷೆಗೆ ಕೇವಲ 3,769 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಈ ವರ್ಷ ಪರೀಕ್ಷೆ ಬರೆದವರ ಸಂಖ್ಯೆ ಶೇ.97.59 ಕುಸಿದಿದ್ದು, ಕಳೆದ ವರ್ಷ ಶೇ.99.54 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. 

ಈ ವರ್ಷ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ, 8,11,195 ವಿದ್ಯಾರ್ಥಿಗಳು ಮೊದಲಬಾರಿಗೆ ಪರೀಕ್ಷೆಯನ್ನು ಬರೆದಿದ್ದು, ಖಾಸಗಿ ನೋಂದಣಿ ಮಾಡಿಕೊಂಡ 35,509 ವಿದ್ಯಾರ್ಥಿಗಳು, 1,701 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು ಎಂದು ಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News