ಕಮಿಷನ್ ಪಾಲು ನಾಗಪುರಕ್ಕೂ ಹೋಗುತ್ತಿದಿಯೇ: ಸುರ್ಜೇವಾಲಾ ಪ್ರಶ್ನೆ

Update: 2022-03-28 15:47 GMT

ಬೆಂಗಳೂರು, ಮಾ.28: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೀಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಸುಮ್ಮನಿದ್ದು, ನಾಗಪುರಕ್ಕೂ ಕಮಿಷನ್ ಪಾಲು ಹೋಗುತ್ತಿದಿಯೇ ಎಂದು ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನೆ ಮಾಡಿದರು.

ಸೋಮವಾರ ಇಲ್ಲಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಅನ್ನ, ಅಕ್ಷರ, ಆಶ್ರಯ, ಆರೋಗ್ಯ, ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಡಾ.ಎಂ.ಬಿ.ಪಾಟೀಲ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‍ಶಾ ಕರ್ನಾಟಕಕ್ಕೆ ಬರುವ ಮಾಹಿತಿ ಇದೆ. ಅವರು ಭ್ರಷ್ಟಾಚಾರ ಆರೋಪ ಹೊತ್ತ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕೇಂದ್ರಕ್ಕೆ, ನಾಗಪುರಕ್ಕೆ ಸಹ ಕಮಿಷನ್ ಹಣ ಹೋಗುತ್ತದೆ ಎಂಬ ಅನುಮಾನ ದೃಢವಾಗಲಿದೆ ಎಂದು ತಿಳಿಸಿದರು.

ಇಂದು ರಾಜ್ಯ ಕಾಂಗ್ರೆಸ್ ಒಂದು ನಿರ್ಣಾಯಕ ಹಂತದಲ್ಲಿ ಇದೆ. ಮತ್ತೊಂದೆಡೆ ರಾಜ್ಯದಲ್ಲಿ ಬಿಜೆಪಿಯ ಅತ್ಯಂತ ಭ್ರಷ್ಟ ಸರಕಾರ ಇದೆ. ಪ್ರಮುಖವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ಶೇ.40ರಷ್ಟು ಕಮಿಷನ್ ಸರಕಾರವಾಗಿದೆ ಎಂದು ಟೀಕಿಸಿದರು. ಈ ಸರಕಾರವು ಜನರ ಮತದಿಂದ ಬಂದಿದ್ದಲ್ಲ. ಶಾಸಕರನ್ನು ಖರೀದಿಸಿ ರಚನೆಯಾದ ಸರಕಾರವಾಗಿದೆ. ಹೀಗಾಗಿ, ಇಂತಹ ಸರಕಾರಕ್ಕೆ ಒಂದು ದಿನವೂ ಅಧಿಕಾರದಲ್ಲಿರುವ ಅರ್ಹತೆ ಇಲ್ಲ. ಒಟ್ಟಾರೆ, ತಮ್ಮ ಸ್ವಂತ ಜೇಬು ತುಂಬಿಕೊಳ್ಳಲು ಈ ಸರಕಾರ ನಡೆಸುತ್ತಿದ್ದಾರೆ. ಆದರೂ, ಸಿಬಿಐ, ಎಸಿಬಿ ಸುಮ್ಮನೆ ಕುಳಿತಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಹಿರಿಯ ನಾಯಕ ಎಂ.ಬಿ.ಪಾಟೀಲ್ ಅವರಿಗೆ ಸಾಕಷ್ಟು ಜವಾಬ್ದಾರಿ ಇದೆ. ಇವರಿಗೆ ಬಲ ತುಂಬುವ ಕಾರ್ಯವನ್ನು ಉಳಿದ ರಾಜ್ಯ ನಾಯಕರು ಮಾಡಬೇಕು. ಮುಂದೆ ಮಹತ್ವದ ಜವಾಬ್ದಾರಿ ನಿಭಾಯಿಸುವ ದಿನ ಬರಲಿದೆ, ಅದಕ್ಕೆ ಸಜ್ಜಾಗಿ ಎಂದು ಸುರ್ಜೇವಾಲಾ ನುಡಿದರು.

ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಾವು ಸಂಪಾದಿಸಿದ ಆಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾರುತ್ತಿದೆ. ಮತ್ತೊಂದೆಡೆ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. 19 ರಿಂದ 30ರ ವಯೋಮಾನದವರಲ್ಲಿ ಶೇ.26 ರಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಒಂಬತ್ತು, ನಗರದಲ್ಲಿ ಏಳಕ್ಕೂ ಅಧಿಕ ಶೇಕಡವಾರು ನಿರುದ್ಯೋಗ ಸಮಸ್ಯೆ ಇದೆ ಎಂದು ತಿಳಿಸಿದರು.

ದಿನೇದಿನೆ ಇಂಧನ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ. ಈ ಬಗ್ಗೆ ಪ್ರತಿಜಿಲ್ಲೆ, ತಾಲೂಕಿನಲ್ಲಿ ಹೋರಾಟ ಮಾಡಿ, ಜನರಲ್ಲಿ ಅರಿವು ಮೂಡಿಸಬೇಕು ಎಂದ ಅವರು, ನಾಗಪುರದವರು ಎಲ್ಲ ಕಡೆ ಕೈಯಾಡಿಸುತ್ತಾರೆ. ಅವರ ಚೇμÉ್ಠಯಿಂದಲೇ ಇμÉ್ಟಲ್ಲಾ ಆಗುತ್ತಿದೆ. ಅವರು ಏನೆ ಮಾಡಿದರು ಜನರನ್ನು ಎಚ್ಚರಿಸಿ, ಜನರೇ ಅವರನ್ನು ಓಡಿಸುವಂತೆ ಮಾಡಿ ಎಂದು ಖರ್ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News