ಸಾಗರ: ಕೆರೆಯಲ್ಲಿ ಯುವ ವೈದ್ಯೆಯ ಮೃತದೇಹ ಪತ್ತೆ
Update: 2022-03-29 10:32 IST
ಸಾಗರ, ಮಾ.29: ವೈದ್ಯೆಯೊಬ್ಬರ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಸೋಮವಾರ ರಾತ್ರಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಜಂಬಗಾರಿನ ನಿವಾಸಿ ಡಾ.ಶರ್ಮದಾ(36) ಮೃತಪಟ್ಟ ವೈದ್ಯೆ.
ಇವರು ಸೋಮವಾರ ರಾತ್ರಿ ತಮ್ಮ ಕ್ಲಿನಿಕ್ ಬಂದ್ ಮಾಡಿಕೊಂಡು ದ್ವಿಚಕ್ರ ವಾಹನದಲ್ಲಿ ಹೊರಟವರು ತಡರಾತ್ರಿಯಾದರೂ ಮನೆ ತಲುಪಿರಲಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮನೆ ಮಂದಿ ಹುಡುಕಾಟ ನಡೆಸಿದಾಗ ಗಣಪತಿ ಕೆರೆ ಬಳಿ ಶರ್ಮದಾ ಅವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ತಕ್ಷಣ ಕೆರೆಯಲ್ಲಿ ಶೋಧಕಾರ್ಯ ನಡೆಸಿದಾಗ ಶರ್ಮದಾ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರ್ಮದಾ ಅವರ ವಿವಾಹವು ಭೀಮನಕೊಣೆ ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿಯಾಗಿರುವ ಸುನೀಲ್ ಎಂಬವರ ಜೊತೆ ಎಂಟು ವರ್ಷಗಳ ಹಿಂದೆ ನೆರವೇರಿತ್ತು. ಶರ್ಮದಾ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.
ಇವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.