ಟಿಪ್ಪುವಿಗೆ ಮೈಸೂರು ಹುಲಿ ಎಂದು ಬಿರುದು ಕೊಟ್ಟಿದ್ದು ಬ್ರಿಟಿಷರು: ಡಿ.ಕೆ ಶಿವಕುಮಾರ್

Update: 2022-03-29 18:20 GMT

ಬೆಂಗಳೂರು: ' ಟಿಪ್ಪುವಿಗೆ ಮೈಸೂರು ಹುಲಿ ಎಂದು ಬಿರುದು ಕೊಟ್ಟಿದ್ದು ಬ್ರಿಟಿಷರು. ನಾನಲ್ಲ, ಕಾಂಗ್ರೆಸ್, ಬಿಜೆಪಿಯವರೂ ಅಲ್ಲ. ಹೋಗಿ ಲಂಡನ್ ಮ್ಯೂಸಿಯಂ ನಲ್ಲಿ ಇರುವ ದಾಖಲೆ ನೋಡಲಿ' ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ  ಹಿಂದೆ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೇ ಟಿಪ್ಪು ಅವರನ್ನು ಹೊಗಳಿದ್ದರು.  ನಮಗೆ ಟಿಪ್ಪು ಬಗ್ಗೆ ಏನು ಪಾಠ ಮಾಡಬೇಕೋ ಮಾಡಿದ್ದಾರೆ. ಅದನ್ನು ನೋಡಲಿ. ನಾವು ಈ ವಿಚಾರದ ಬಗ್ಗೆ ಆಮೇಲೆ ಮಾತನಾಡೋಣ' ಎಂದರು.

ಪಠ್ಯ ಪುಸ್ತಕ ಪರಿಶೀಲನೆ ಸಮಿತಿಯಲ್ಲಿ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು ಇದ್ದಾರೆ ಎಂದು ಭಾವಿಸಿದ್ದೇನೆ. ಅವರು ಕುಲಂಕಷವಾಗಿ ಇವೆಲ್ಲವನ್ನೂ ನೋಡುತ್ತಾರೆ ಎಂಬ ಭರವಸೆ ಇದೆ. ಇತಿಹಾಸವನ್ನು ಯಾರಿಗೂ ತಿರುಚಲು ಸಾಧ್ಯವಿಲ್ಲ. ಟಿಪ್ಪು ಬ್ರಿಟಿಷರ ಜತೆ ಹೋರಾಡಿದ್ದು, ಕೊಲ್ಲೂರು, ಶೃಂಗೇರಿ ಮಠಗಳಿಗೆ ಏನೇನು ಮಾಡಿದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಅದನ್ನು ಯಾರೂ ಸೃಷ್ಟಿಸಲು, ತಿರುಚಲು ಆಗದು ಎಂದು ತಿಳಿಸಿದರು.

ಸಮಿತಿಯವರು ಏನು ಮಾಡುತ್ತಾರೆ, ಸರಕಾರ ಏನು ಮಾಡುತ್ತದೆ ನೋಡಿ ಆಮೇಲೆ ಏನು ಮಾಡಬೇಕೋ ತೀರ್ಮಾನ ಮಾಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News