ಭೂ ಕಬಳಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ತನಿಖಾ ದಳ ರಚನೆ: ಸಚಿವ ಆರ್.ಅಶೋಕ್

Update: 2022-03-29 13:49 GMT

ಬೆಂಗಳೂರು, ಮಾ.29: ರಾಜ್ಯದಲ್ಲಿ ನಡೆದಿರುವ ಭೂ ಕಬಳಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ತನಿಖಾ ದಳ ರಚಿಸಲು ಸರಕಾರ ಮುಂದಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಮಂಗಳವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಅವರು, ತೇಲ್ಗೆರೆ ಗ್ರಾಮದಲ್ಲಿ 211 ಎಕರೆ ಸರಕಾರಿ ಗೋಮಾಳವಿದೆ. ಅದರಲ್ಲಿ 15 ಜನರಿಗೆ 16 ಎಕರೆಯಂತೆ ಮಂಜೂರು ಮಾಡಿರುವುದು ಕೂಡ ಅನುಮಾನವಿದೆ. ಕಳೆದ ವರ್ಷ ಈ ಪ್ರಕರಣ ತಮ್ಮ ಗಮನಕ್ಕೆ ಬಂದ ಬಳಿಕ ಜಿಲ್ಲಾಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ತನಿಖೆ ಮಾಡಿಸಲಾಗಿದೆ ಎಂದರು.

ಬಹಳ ವರ್ಷದಿಂದ ಇಲ್ಲಿ ಅಲ್ಲಿ ಫಿಲ್ಟರ್ ಮರಳು ದಂಧೆ ನಡೆಯುತ್ತಿತ್ತು. ನಮ್ಮ ಸರಕಾರ ಆರೋಪಿಗಳಿಗೆ 2.18 ಕೋಟಿ ರೂಪಾಯಿ ದಂಡ ಹಾಕಿದೆ. ಫಿಲ್ಟರ್ ಮರಳಿಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಕಳಪೆ ಮರಳಿನಿಂದ ಮನೆ ಕಟ್ಟಿ ಅವು ಕುಸಿದಿರುವ ಪ್ರಕರಣಗಳು ಹಲವು ವರದಿಯಾಗಿವೆ ಎಂದು ಉಲ್ಲೇಖಿಸಿದರು.

ಅದೇ ರೀತಿ, ಕುಂದಾಣ ಹೋಬಳಿಯ ಭೂ ಒತ್ತುವರಿಯನ್ನು ಮುಖ್ಯಮಂತ್ರಿಯವರು ರಚಿಸುವ ವಿಶೇಷ ತನಿಖಾ ದಳದ ಮೂಲಕವೇ ತನಿಖೆ ನಡೆಸುವುದಾಗಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News