ಜಾತ್ರೆಗಳಲ್ಲಿ ಇತರ ಧರ್ಮೀಯರಿಗೆ ವ್ಯಾಪಾರಕ್ಕೆ ನಿರ್ಬಂಧ ಸಂವಿಧಾನ ವಿರೋಧಿ: ಬಿಜೆಪಿ ಶಾಸಕ ಅನಿಲ್ ಬೆನಕೆ
Update: 2022-03-30 09:46 IST
ಬೆಳಗಾವಿ: 'ಜಾತ್ರೆಗಳಲ್ಲಿ ಇತರ ಧರ್ಮೀಯ ವ್ಯಾಪಾರಸ್ಥರಿಗೆ ಆರ್ಥಿಕ ನಿರ್ಬಂಧ ಹೇರಲು ನಾವು ಅವಕಾಶ ಕೊಡುವುದಿಲ್ಲ' ಎಂದು ಬೆಳಗಾವಿ ನಗರದ ಉತ್ತರ ಮತ ಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹಾಕುವ ಪ್ರಶ್ನೆ ಬರುವುದಿಲ್ಲ. ಇತರ ಧರ್ಮೀಯರ ವ್ಯಾಪಾರಕ್ಕೆ ನಿರ್ಬಂಧ ಹೇರುವುದು ಸಂವಿಧಾನ ವಿರೋಧಿಯಾಗಿದ್ದು, ನಾವು ಕೂಡ ನಿರ್ಬಂಧ ಹಾಕುವುದಿಲ್ಲ. ಜನರು ನಿರ್ಬಂಧ ಹಾಕಿದರೆ ನಮಗೆ ಏನೂ ಹೇಳಲು ಆಗಲ್ಲ ಎಂದು ಕಿಡಿಕಾರಿದರು.
ಜನರು ಅಲ್ಲೇ ಖರೀದಿ ಮಾಡಬೇಕು, ಇಲ್ಲೇ ಮಾಡಬೇಕು ಅನ್ನೋದು ತಪ್ಪು. ಎಲ್ಲರಿಗೂ ಅವರಿಗೆ ಬೇಕಾದಲ್ಲಿ ವ್ಯವಹಾರ ಮಾಡಲು ಅವಕಾಶವಿದೆ. ಎಲ್ಲಿಂದ ಏನೂ ಖರೀದಿ ಮಾಡಬೇಕು ಎಂದು ಜನರು ತೀರ್ಮಾನ ಮಾಡಬೇಕು ಎಂದು ಹೇಳಿದರು.