19 ಲಕ್ಷ ಇವಿಎಂ ನಾಪತ್ತೆ: ವಿಧಾನಸಭೆಯಲ್ಲಿ ಚರ್ಚೆ

Update: 2022-03-30 12:21 GMT

ಬೆಂಗಳೂರು: '19 ಲಕ್ಷ ವಿದ್ಯುನ್ಮಾನ ಮತಯಂತ್ರಗಳು – (evm) ನಾಪತ್ತೆಯಾಗಿವೆ' ಎಂದು ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ್ ಆರೋಪಿಸಿದರು. 

ಚುನಾವಣೆ ಸುಧಾರಣೆಗಳ ಕುರಿತು ವಿಧಾನಸಭೆಯಲ್ಲಿ ಮಂಗಳವಾರ ನಡೆದ ವಿಶೇಷ ಚರ್ಚೆ ಸಂದರ್ಭದಲ್ಲಿ ಇವಿಎಂಗಳ ನಾಪತ್ತೆ ಹಾಗೂ ದುರ್ಬಳಕೆ ಕುರಿತ ಎಚ್.ಕೆ. ಪಾಟೀಲ್ ಅವರು ಮಾತನಾಡಿದರು. 

'2016ರಲ್ಲಿ ಬಿಇಎಲ್‌ನಿಂದ 9.64 ಲಕ್ಷ ಇವಿಎಂ, ಇಸಿಐಎಲ್ ನಿಂದ 9.27 ಲಕ್ಷ ಇವಿಎಂ ಮತ್ತು 2019ರಲ್ಲಿ ಬಿಇಎಲ್‌ನಿಂದ 62000 ಇವಿಎಂ ಪೂರೈಕೆಯಾಗಿವೆ. ಆದರೆ, ಚುನಾವಣಾ ಆಯೋಗಕ್ಕೆ ಈ ಬಗ್ಗೆ ಮಾಹಿತಿ ಇಲ್ಲ. ಇವು ಎಲ್ಲಿಗೆ ಪೂರೈಕೆ ಆಗಿವೆ ಎಂಬ ಮಾಹಿತಿ ಯಾರಿಗೂ ಇಲ್ಲ. ಈಗಾಗಲೇ ಇವಿಎಂ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಚುನಾವಣಾ ಆಯೋಗದ ಅಧಿಕಾರಿಗಳನ್ನು ಸದನಕ್ಕೆ ಕರೆಸಿ ಮಾಹಿತಿ ಪಡೆಯಬೇಕು. ನಾನು ಹೇಳಿದ್ದು ಸುಳ್ಳು ಅಂತಾದರೆ ಯಾವುದೇ ಶಿಕ್ಷೆಗೂ ಸಿದ್ಧ'' ಎಂದು ಎಚ್.ಕೆ. ಪಾಟೀಲ್ ಹೇಳಿದರು.

ವಿಷಯದ ಗಂಭೀರತೆ ಅರಿತ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 'ನಿಮ್ಮ ಬಳಿ ಇರುವ ಮಾಹಿತಿ ಕೊಡಿ ಆಯೋಗದಿಂದ ವಿವರಣೆ ಪಡೆಯಲು ನನ್ನ ಕಾರ್ಯ ವ್ಯಾಪ್ತಿಯಲ್ಲಿ ಸೂಚಿಸುತ್ತೇನೆ' ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News