2021ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಿದ ರಾಜ್ಯ ಸರಕಾರ
Update: 2022-03-30 21:04 IST
ಬೆಂಗಳೂರು, ಮಾ.30: ಪೊಲೀಸ್ ಇಲಾಖೆಯಿಂದ ನೀಡಲಾಗುವ 2021ನೇ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃತರ ಪಟ್ಟಿಯು ಪ್ರಕಟವಾಗಿದ್ದು, ಪೊಲೀಸ್ ಇಲಾಖೆಯ ವಿವಿಧ ಹಂತದ ಒಟ್ಟು 135 ಪೊಲೀಸರು ಪದಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರು ಸಿಐಡಿ ಡಿವೈಎಸ್ಪಿ ವೀರೇಂದ್ರ ಕುಮಾರ್, ಉಡುಪಿ ಡಿಎಆರ್ ವಿಭಾಗದ ಡಿವೈಎಸ್ಪಿ ರಾಘವೇಂದ್ರ ಆರ್. ನಾಯಕ್, ಇನ್‍ಸ್ಪೆಕ್ಟರ್ ಗಳಾದ ಪ್ರಕಾಶ್, ಮಂಜುನಾಥ್, ನಟರಾಜ್, ಶಿವಕುಮಾರ್, ರಾವ್ ಣೇಶ್ ಜನಾರ್ಧನ್, ಸಲೀಂ ಸಿ ನದಾಫ್, ಕೆಎಸ್‍ಆರ್ಪಿ ವಿಶೇಷ ಆರ್‍ಪಿಐ ಎಸ್.ಇಮ್ರಾನ್, ಸಿಪಿಐ ದೌಲತ್ ಎನ್.ಕುರಿ, ಎಎಸ್ಸೈ ಲತೀಫ್ ಖಾನ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಶಬ್ಬೀರ್ ಖಾಜಿ ಘೋಡೆವಾಲೆ ಸೇರಿದಂತೆ ಒಟ್ಟು 135 ಅಧಿಕಾರಿ ಮತ್ತು ಸಿಬ್ಬಂದಿಗೆ ಪದಕ ಪುರಸ್ಕಾರ ಲಭ್ಯವಾಗಲಿದೆ.
ಎ.2ರಂದು ಕೋರಮಂಗಲದ ಕೆಎಸ್‍ಆರ್ಪಿ ಮೈದಾನದಲ್ಲಿ ಪ್ರದಾನ ಕಾರ್ಯಕ್ರಮ ಜರುಗಲಿದೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.