×
Ad

ಕರ್ನಾಟಕವನ್ನು ಈಗ ಅಧಿಕೃತವಾಗಿ ಬಜರಂಗದಳ ನಡೆಸುತ್ತಿದೆ: ಪ್ರಿಯಾಂಕ್ ಖರ್ಗೆ ಆಕ್ರೋಶ

Update: 2022-03-31 18:29 IST

ಬೆಂಗಳೂರು: ನಾಡಿನ ಜನತೆಯನ್ನು ಹಲಾಲ್ ಕಟ್, ಜಟ್ಕಾ ಕಟ್ ಎಂಬ ಅಪ್ರಬುದ್ದ ಚರ್ಚೆಯಲ್ಲಿ ತೊಡಗಿಸಿ ಸರ್ಕಾರ ಇಂದಿರಾ ಕ್ಯಾಂಟೀನ್‌ನ 'ಅನುದಾನ ಕಟ್' ಮಾಡಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,  ''ಆಹಾರದ ವಿಷಯದಲ್ಲೂ ರಾಜಕೀಯ ಮಾಡುತ್ತ, ಕಾಶ್ಮೀರ್ ಫೈಲ್ಸ್‌ಗೆ ತೆರಿಗೆ ವಿನಾಯಿತಿ ನೀಡಿದ ಬಿಜೆಪಿ ಸರ್ಕಾರಕ್ಕೆ ಜನರಿಗೆ ಆಹಾರ ನೀಡುವ ಕನಿಷ್ಠ ಯೋಗ್ಯತೆ ಇಲ್ಲದಾಗಿದೆ'' ಎಂದು  ವಾಗ್ದಾಳಿ ನಡೆಸಿದ್ದಾರೆ. 

'ಕರ್ನಾಟಕವನ್ನು ಈಗ ಅಧಿಕೃತವಾಗಿ ಬಜರಂಗದಳ ಮತ್ತು ಇತರ ಸಮಾಜ ಘಾತುಕ ಶಕ್ತಿಗಳು ನಡೆಸುತ್ತಿದೆ. ಮುಖ್ಯಮಂತ್ರಿ  ಬಿಎಸ್ ಬೊಮ್ಮಾಯಿ ಅವರಿಗೆ  ಅಭಿನಂದನೆಗಳು,   ನೀವು ಯೋಗಿಯನ್ನು ಅನುಕರಿಸುವ ಹಾದಿಯಲ್ಲಿದ್ದೀರಿ' ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News