ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ ಕೋರ್ಟ್
Update: 2022-03-31 19:09 IST
ಬೆಂಗಳೂರು, ಮಾ.31: ಪರಿಚಯಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ನಗರದ ಪೊಕ್ಸೊ ವಿಶೇಷ ಕೋರ್ಟ್ 20 ವರ್ಷ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಕಿರಣ್‍ಕುಮಾರ್ ಶಿಕ್ಷೆಗೆ ಗುರಿಯಾಗಿರುವ ಆರೋಪಿಯಾಗಿದ್ದಾನೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಎಫ್‍ಟಿಎಸ್‍ಸಿ–3ನೆ ಕೋರ್ಟ್ ಆರೋಪಿಗೆ ಶಿಕ್ಷೆ ವಿಧಿಸಿದ್ದು, ದಂಡದ ಮೊತ್ತ ಪಾವತಿಸದೇ ಇದ್ದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.
ಪ್ರಕರಣವೇನು: ಕಿರಣ್ ಕುಮಾರ್ ಪರಿಚಯಸ್ಥ ಬಾಲಕಿಯ ಮೇಲೆ 2014ರ ಅ.30ರಂದು ಅತ್ಯಾಚಾರ ಎಸಗಿದ್ದ ಎಂದು ಮಡಿವಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ನಂತರ ಕೋರ್ಟ್‍ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಎಫ್‍ಟಿಎಸ್‍ಸಿ–3ನೆ ಕೋರ್ಟ್ ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರ ಕೃಷ್ಣವೇಣಿ ಮತ್ತು ಗೊರವರ ಗೀತಾ ರಾಮಕೃಷ್ಣ ವಾದ ಮಂಡಿಸಿದ್ದರು.