ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಕಟ: ಡಾ.ನಾ. ಮೊಗಸಾಲೆ ಸಹಿತ ಐವರಿಗೆ ಗೌರವ ಪ್ರಶಸ್ತಿ
ಬೆಂಗಳೂರು, ಮಾ.31: ಕರ್ನಾಟಕ ಸಾಹಿತ್ಯ ಅಕಾಡಮಿಯ 2021ನೆ ಸಾಲಿನ ಗೌರವ ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ.ನಾ. ಮೊಗಸಾಲೆ ಸೇರಿದಂತೆ ಐವರು, 2021ನೆ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿಗೆ ಸಾಹಿತಿ ಅಬ್ದುಲ್ ರಶೀದ್ ಸೇರಿದಂತೆ 10 ಮಂದಿ, 2020 ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಎಚ್.ಟಿ.ಪೋತೆ ಸೇರಿದಂತೆ 19 ಲೇಖಕರು, 2020 ಸಾಲಿನ ದತ್ತಿ ಬಹುಮಾನ ಪುರಸ್ಕಾರಕ್ಕೆ ಪುರುಷೋತ್ತಮ ಬಿಳಿಮಲೆ ಸೇರಿದಂತೆ 10 ಲೇಖಕರು ಆಯ್ಕೆಯಾಗಿದ್ದಾರೆ.
ಗುರುವಾರ ಕನ್ನಡ ಭವನದಲ್ಲಿ ಅಕಾಡಮಿಯ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಪ್ರಶಸ್ತಿ ಪಟ್ಟಿ ಬಿಡುಗಡೆಗೊಳಿಸಿ, ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಯು 50 ಸಾವಿರ ರೂ.ನಗದು, ಸಾಹಿತ್ಯಶ್ರೀ ಪ್ರಶಸ್ತಿಯು 25 ಸಾವಿರ ರೂ.ನಗದು, ಪುಸ್ತಕ ಬಹುಮಾನ ಪ್ರಶಸ್ತಿಯು 25 ಸಾವಿರ ರೂ.ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು. ಪ್ರಶಸ್ತಿ ಪುರಸ್ಕøತರ ಪಟ್ಟಿ ಈ ಕೆಳಗಿನಂತಿದೆ.
2021ನೆ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು
ಜೀನದತ್ತ ದೇಸಾಯಿ
ಡಾ.ನಾ.ಮೊಗಸಾಲೆ
ಡಾ.ಸರಸ್ವತಿ ಚಿಮ್ಮಲಗಿ
ಪ್ರೊ.ಬಸವರಾಜ ಕಲ್ಗುಡಿ
ಯಲ್ಲಪ್ಪ ಕೆ.ಕೆ.ಪುರ
2021ನೆ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತರು
ಡಾ.ಚಂದ್ರಕಲಾ ಬಿದರಿ
ಪ್ರೊ.ಎಂ.ಎನ್.ವೆಂಕಟೇಶ್
ಡಾ.ಚನ್ನಬಸವಯ್ಯ ಹಿರೇಮಠ
ಡಾ.ಮ.ರಾಮಕೃಷ್ಣ
ಅಬ್ದುಲ್ ರಶೀದ್
ಡಾ.ವೈ.ಎಂ.ಭಜಂತ್ರಿ
ಜೋಗಿ(ಗಿರೀಶ್‍ರಾವ್ ಅತ್ವಾರ್)
ಮೈಸೂರು ಕೃಷ್ಣಮೂರ್ತಿ
ಗಣೇಶ ಅಮೀನಗಡ
ಆಲೂರು ದೊಡ್ಡನಿಂಗಪ್ಪ
2020ನೆ ಸಾಲಿನ ದತ್ತಿ ಬಹುಮಾನ ಪುರಸ್ಕೃತರು
ಪದ್ಮಜಾ ಜಯತೀರ್ಥ-ಬೆಳದಿಂಗಳ ಚೆಲುವು(ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ)
ಎಂ.ಎಸ್.ವೇದಾ-ದೊಡ್ಡ ತಾಯಿ(ಚದುರಂಗ ದತ್ತಿನಿಧಿ ಬಹುಮಾನ)
ಆರತಿ ಘಟಿಕಾರ್-ವಠಾರ ಮೀಮಾಂಸೆ(ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ನಿಧಿ ಬಹುಮಾನ)
ಪುರುಷೋತ್ತಮ ಬಿಳಿಮಲೆ-ಕಾಗೆ ಮುಟ್ಟಿದ ನೀರು(ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ)
ತಾರಿಣಿ ಶುಭದಾಯಿನಿ-ಕುವೆಂಪು ಸ್ತ್ರೀ ಸಂವೇದನೆ(ಪಿ.ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ)
ಪದ್ಮರಾಜ ದಂಡಾವತಿ-ಸೀತಾ(ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ)
ಕುಶ್ವಂತ್ ಕೋಳಿಬೈಲು-ಕೂರ್ಗ್ ರೆಜಿಮೆಂಟ್(ಮಧುರಚೆನ್ನ ದತ್ತಿನಿಧಿ ಬಹುಮಾನ)
ಕೆ.ಎಂ.ಶ್ರೀನಿವಾಸಗೌಡ, ಜಿ.ಕೆ.ಶ್ರೀಕಂಠಮೂರ್ತಿ-The Bride In The Rainy (ಅಮೆರಿಕನ್ನಡ ದತ್ತಿನಿಧಿ ಬಹುಮಾನ)
ನಡಹಳ್ಳಿ ವಸಂತ-ಸಮರಸದ ದಾಂಪತ್ಯ(ಬಿ.ವಿ.ವೀರಭದ್ರಪ್ಪ ದತ್ತಿನಿಧಿ ಬಹುಮಾನ)
ಶ್ರೀನಿವಾಸ ಸಿರನೂರಕರ್-ಪುರಂದರದಾಸರ ಬಂಡಾಯ ಪ್ರಜ್ಞೆ(ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯಗಂಗೂರ್ ದತ್ತಿನಿಧಿ ಬಹುಮಾನ)
2020 ನೆ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು
ಆರನಕಟ್ಟೆ ರಂಗನಾಥ-ಕಾರುಣ್ಯದ ಮೋಹಕ ನವಿಲುಗಳೆ(ಕಾವ್ಯ)
ಮಂಜುಳಾ ಹಿರೇಮಠ-ಗಾಯಗೊಂಡವರಿಗೆ(ನವಕವಿಗಳ ಪ್ರಥಮ ಸಂಕಲನ)
ಎಚ್.ಟಿ.ಪೋತೆ-ಬಯಲೆಂಬೊ ಬಯಲು(ಕಾದಂಬರಿ)
ಎಸ್.ಸುರೇಂದ್ರನಾಥ್-ಬಂಡಲ್ ಕತೆಗಳು(ಸಣ್ಣಕತೆ)
ಮಂಗಳ ಟಿ.ಎಸ್.-ಆರೋಹಿ(ನಾಟಕ)
ಎನ್.ರಾಮನಾಥ್-ನಿದ್ರಾಂಗನೆಯ ಸೆಳವಿನಲ್ಲಿ(ಲಲಿತ ಪ್ರಬಂಧ)
ಭಾರತಿ ಬಿ.ವಿ.-ನಕ್ಷತ್ರಗಳ ಸುಟ್ಟ ನಾಡಿನಲ್ಲಿ(ಪ್ರವಾಸ ಸಾಹಿತ್ಯ)
ಕೃಷ್ಣ ಕೊಲ್ಹಾರ ಕುಲಕರ್ಣಿ-ಗ್ರಾಮ ಸ್ವರಾಜ್ ಸಾಕಾರಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ(ಜೀವನಚರಿತ್ರೆ/ಆತ್ಮಕಥೆ)
ಬಸವರಾಜ ಸಬರದ-ಹೈದ್ರಾಬಾದ್ ಕರ್ನಾಟಕದ ಆಧುನಿಕ ಸಾಹಿತ್ಯ ಮೀಮಾಂಸೆ(ಸಾಹಿತ್ಯ ವಿಮರ್ಶೆ)
ಕೆ.ರವೀಂದ್ರನಾಥ-ಲಿಂಗಣ್ಣ ಕವಿಯ ವರರಮ್ಯ ರತ್ನಾಕರ(ಗ್ರಂಥ ಸಂಪಾದನೆ)
ವೈ.ಜಿ.ಭಗವತಿ-ಮತ್ತೆ ಹೊಸ ಗೆಳೆಯರು(ಮಕ್ಕಳ ಸಾಹಿತ್ಯ)
ಎಸ್.ಪಿ.ಯೋಗಣ್ಣ-ಆಧ್ಯಾತ್ಮಿಕ ಆರೋಗ್ಯ ದರ್ಶನ(ವಿಜ್ಞಾನ ಸಾಹಿತ್ಯ)
ಎಂ.ಎಂ.ಗುಪ್ತ-ಗಾಂಧೀಯ ಅರ್ಥಶಾಸ್ತ್ರ(ಮಾನವಿಕ)
ಪಿ.ತಿಪ್ಪೇಸ್ವಾಮಿ ಚಳ್ಳಕೆರೆ-ಮ್ಯಾಸಬೇಡರ ಮೌಖಿಕ ಕಥನಗಳು(ಸಂಶೋಧನೆ)
ಕೇಶವ ಮಳಗಿ-ದೈವಿಕ ಹೂವಿನ ಸುಗಂಧ(ಅನುವಾದ-1, ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ)
ಸುಧಾಕರನ್ ರಾಮಂತಳಿ-ಶಿವಂಡೆ ಕಡುಂತುಡಿ(ಅನುದಾದ-2, ಕನ್ನಡದಿಂದ ಭಾರತೀಯ ಭಾಷೆಗೆ ಅನುವಾದ)
ನರಹಳ್ಳಿ ಬಾಲಸುಬ್ರಹ್ಮಣ್ಯ-ಪದಸೋಪಾನ(ಅಂಕಣ ಬರಹ/ವೈಚಾರಿಕ ಬರಹ)
ಸಿದ್ಧಗಂಗಯ್ಯ ಹೊಲತಾಳು-ಸುವರ್ಣಮುಖಿ(ಸಂಕೀರ್ಣ)
ಎಸ್.ಬಿ.ಬಸೆಟ್ಟಿ-ಭಾರತದ ರಾಷ್ಟ್ರಧ್ವಜ: ವಿಕಾಸ ಹಾಗೂ ಸಂಹಿತೆ(ಲೇಖಕರ ಮೊದಲ ಸ್ವತಂತ್ರ ಕೃತಿ)