ನಂಜನಗೂಡು: ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾದ ಚಿರತೆ

Update: 2022-03-31 16:39 GMT

ಮೈಸೂರು,ಮಾಚ್೯.31:   ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ಏಚಗಳ್ಳಿ ಗ್ರಾಮದ ಸೋಮಶೇಖರ್ ದೀಪು ಹಾಗೂ ದಿನೇಶ್ ಎಂಬವರ ತೋಟದಲ್ಲಿ ಇರಿಸಿದ್ದ ಬೋನಿಗೆ ಎರಡು ವರ್ಷದ ಗಂಡು ಚಿರತೆ  ಸರಿಯಾಗಿದೆ.

ಕಳೆದ ಆರು  ತಿಂಗಳಿನಿಂದ ತೋಟಗಳಲ್ಲಿ ವಾಸಮಾಡುವ ಗ್ರಾಮಸ್ಥರ ಮೇಕೆಗಳು ನಾಯಿಮರಿಗಳನ್ನು ಚಿರತೆಗಳು ಕೊಂದು ಹಾಕಿರುವುದು ಇಲ್ಲಿನ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತ್ತು ಈ ಸಂಬಂಧ  ಅರಣ್ಯ ಇಲಾಖೆ ಗಮನಕ್ಕೆ ತರಲಾಗಿತ್ತು.

ಅರಣ್ಯ  ಇಲಾಖೆಯವರು ಬೋನು ಇಟ್ಟು ಎರಡು ತಿಂಗಳಾಗಿತ್ತು . ಗುರುವಾರ ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ.

ಈ ಕಾರ್ಯಾಚರಣೆಯಲ್ಲಿ ನಂಜನಗೂಡು ಅರಣ್ಯ ವಲಯ ಅಧಿಕಾರಿಗಳಾದ ರಕ್ಷಿತ್ ಶರತ್ ಕುಮಾರ್ ವಲಯ ಅರಣ್ಯ ಉಪವಿಭಾಗಾಧಿಕಾರಿ ಮದನ್ ಕುಮಾರ್ ಭಾಗಿಯಾಗಿದ್ದರು. ಇನ್ನೂ ಎರಡು ಮೂರು ಚಿರತೆಗಳು ಇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News