ಕಲಬುರಗಿ: ಚಾಕುವಿನಿಂದ ಇರಿದು ಯುವಕನ ಕೊಲೆ

Update: 2022-04-01 09:27 GMT

ಕಲಬುರಗಿ, ಎ.1: ಚಾಕುವಿನಿಂದ ಇರಿದು ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಎಂಎಸ್‌ಕೆ ಮಿಲ್ ನ ಮೌಲಾ ಅಲಿ ಕಟ್ಟೆಯ ಹತ್ತಿರ ಗುರುವಾರ ರಾತ್ರಿ ನಡೆದಿದೆ.

ಮುಹಮ್ಮದ್ ಸುಹೈಲ್ (21) ಕೊಲೆಯಾದ ಯುವಕ. ಇವರು ಬೆನ್ನು ಮತ್ತು ಎದೆಗೆ ಚಾಕುವಿನಿಂದ‌ ಇರಿಯಲಾಗಿದೆ. ಬೆನ್ನಿಗೆ ಚುಚ್ಚಿದ ಸ್ಥಿತಿಯಲ್ಲೇ ಚಾಕುವನ್ನು ತೊರೆದು ಹಂತಕರು ಪರಾರಿಯಾಗಿದ್ದಾರೆ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News