ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ ಅಲೈಡ್ ಸೈನ್ಸ್ ಕೋರ್ಸ್ ಮಂಜೂರು: ಸಿ.ಟಿ. ರವಿ
ಚಿಕ್ಕಮಗಳೂರು, ಎ.1: ಜಿಲ್ಲಾ ಮೆಡಿಕಲ್ ಕಾಲೇಜಿನಲ್ಲಿ 2021-22ನೇ ಸಾಲಿನಿಂದ ಅಲೈಡ್ ಹೆಲ್ತ್ ಸೈನ್ಸ್‍ಸ್ ಕೋರ್ಸ್‍ಗಳನ್ನು ಹೊಸದಾಗಿ ಪ್ರಾರಂಭಿಸಲು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಸಚಿವರು ಅನುಮತಿ ನೀಡಿದ್ದಾರೆಂದು ಶಾಸಕ ಸಿ.ಟಿ.ರವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿಗೆ ಹೊಂದಿಕೊಂಡಂತೆ ಇದೇ ಸಾಲಿನಿಂದ ಹೊಸದಾಗಿ ಅವೈಡ್ ಹೆಲ್ತ್ ಸೈನ್ಸ್ ಕೋರ್ಸ್‍ಗಳನ್ನು ಪ್ರಾರಂಭಿಸಲು ಅನುಮತಿ ದೊರೆತಿದ್ದು, ತಲಾ 20 ಸೀಟುಗಳ ಪ್ರವೇಶಾತಿಯುಳ್ಳ ಬಿಎಸ್ಸಿ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ, ಬಿಎಸ್ಸಿ ಆಪ್ಟೋಮೆಟ್ರಿ, ಬಿಎಸ್ಸಿ ಇಮೇಜಿಂಗ್ ಟೆಕ್ನಾಲಜಿ, ಬಿಎಸ್ಸಿ ಆಪರೇಶನ್ ಥಿಯೇಟರ್ ಟೆಕ್ನಾಲಜಿ ಕೋರ್ಸ್‍ಗಳು ಹಾಗೂ ತಲಾ 10 ಸೀಟು ಪ್ರವೇಶಾತಿಯುಳ್ಳ ಬಿಎಸ್ಸಿ ರೆನಾಲ್ ಡಯಾಲಿಸಿಸ್ ಟೆಕ್ನಾಲಜಿ ಕೋರ್ಸ್‍ಅನ್ನು ಹೊಸದಾಗಿ ಪ್ರಾರಂಭಿಸಿ ಸಂಯೋಜನೆ ನೀಡಲು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಅನುಮತಿ ನೀಡಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ