×
Ad

ಶಿವಮೊಗ್ಗ: ಯುವಕನ ಕೊಲೆ

Update: 2022-04-02 10:51 IST

ಶಿವಮೊಗ್ಗ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಬಿ.ಎಚ್.ರಸ್ತೆಯಲ್ಲಿ ತಡರಾತ್ರಿ ನಡೆದಿದೆ.

ಕುಶನ್ ಚಂದು (29) ಮೃತ ಯುವಕ ಎಂದು ಗುರುತಿಸಲಾಗಿದೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಪರಶುರಾಮ ಎಂಬಾತ ಕೊಲೆ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಕುಶನ್ ಚಂದು ತನ್ನ ಸ್ನೇಹಿತ ಸತೀಶ್ ಎಂಬಾತನ ಜೊತೆ ರಾತ್ರಿ ಹೊಟೇಲ್ ಒಂದಕ್ಕೆ ಊಟಕ್ಕೆ ತೆರಳಿದ್ದು, ಈ ವೇಳೆ ಪರಶುರಾಮ ಮತ್ತು ಕುಶನ್‌ ಮಧ್ಯೆ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಜಗಳವಾಗಿದೆ. ಈ ಸಂದರ್ಭ ಕುಶನ್ ಚಂದು ತಲೆ ಮೇಲೆ ಪರಶುರಾಮ ಕಲ್ಲು ಎತ್ತಿ ಹಾಕಿದ್ದಾನೆ ಎಂದು ದೂರಲಾಗಿದೆ.

ಪರಶುರಾಮ ಮಹಾನಗರ ಪಾಲಿಕೆಯ ಕಸದ ಗಾಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ರಾಜೀವ್ ಗಾಂಧಿ ಬಡಾವಣೆಯ ನಿವಾಸಿಯಾಗಿರುವ ಪರಶುರಾಮ ಮತ್ತು ಕುಶನ್‌ ಚಂದು ಮಧ್ಯೆ ಕೆಲವು ವಿಚಾರಗಳಿಗೆ ದ್ವೇಷ ಬೆಳೆದಿತ್ತು. ಇದೆ ಕಾರಣಕ್ಕೆ ಕೊಲೆ ಮಾಡಿರುವ ಶಂಕೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News