ರಾಜ್ಯದಲ್ಲಿ ಕೊರೋನ ಮತ್ತಷ್ಟು ಇಳಿಕೆ: ಶನಿವಾರ 34 ಮಂದಿಗೆ ಕೋವಿಡ್ ದೃಢ; ಸಾವಿನ ಸಂಖ್ಯೆ ಶೂನ್ಯ

Update: 2022-04-02 17:27 GMT

ಬೆಂಗಳೂರು: ರಾಜ್ಯದಲ್ಲಿ ಶನಿವಾರ 34 ಹೊಸ ಕೊರೋನ ಪ್ರಕರಣಗಳು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 39,45,610ಕ್ಕೆ ಏರಿಕೆ ಆಗಿದೆ.‌ಈ ನಡುವೆ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 3945576ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 40,054ಕ್ಕೆ ತಲುಪಿದೆ.   

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 17,417 ಮಂದಿಗೆ ಕೊರೋನ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಪಾಸಿಟಿವ್ ದರವೂ ಶೇ.0.19 ರಷ್ಟಿದೆ. ಇತ್ತ 79 ಸೋಂಕಿತರು ಗುಣಮುಖರಾಗಿದ್ದು, ಈ ತನಕ 39,03,998 ಮಂದಿ ಗುಣಮುಖರಾಗಿದ್ದಾರೆ.

ಒಟ್ಟಾರೆ, ಇದುವರೆಗೂ 40,054 ಸೋಂಕಿಗೆ ಬಲಿಯಾಗಿದ್ದಾರೆ. 1,516 ಸಕ್ರಿಯ ಪ್ರಕರಣಗಳಿವೆ. ಇನ್ನು ಬೆಂಗಳೂರಿನಲ್ಲಿ 31 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 17,81,719ಕ್ಕೆ ಏರಿಕೆ ಆಗಿದೆ.

67 ಮಂದಿ ಗುಣಮುಖರಾಗಿದ್ದು, ಈತನಕ 17,63,360 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ. ಸದ್ಯ ಸಾವಿನ ಸಂಖ್ಯೆ 16,960 ರಷ್ಟಿದ್ದು, 1,398 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News