×
Ad

ಹಿಂದುತ್ವ ಸಂಘಟನೆಗಳ ಕರೆ ಬಹಿಷ್ಕರಿಸಿ ಮುಸ್ಲಿಮರ ಅಂಗಡಿಯಿಂದ ಮಾಂಸ ಖರೀದಿಸಿದ ದಲಿತರು, ರೈತರು ಮತ್ತು ಸಾಹಿತಿಗಳು

Update: 2022-04-03 12:55 IST

ಮೈಸೂರು: ಮುಸ್ಲಿಂ ಅಂಗಡಿಯಲ್ಲಿ ಶಾಂತಿ ಸೌಹಾರ್ದತೆ, ಸಹಬಾಳ್ವೆಯ ಸಂದೇಶ ಸಾರುವ ಕಾರಣಕ್ಕಾಗಿ ಮಾಂಸ ಖರೀದಿಸುವ ಕಾರ್ಯಕ್ರಮ ರವಿವಾರ ನಡೆಯಿತು.

ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ  ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರಿನ ಶಾಂತಿ ನಗರ( ಮಹದೇವಪುರ ರಿಂಗ್ ರಸ್ತೆ) ದಲ್ಲಿರುವ ಮುಸ್ಲಿಮರ ಅಂಗಡಿಯಿಂದ ಹಲಾಲ್ ಕಟ್  ಮಾಂಸ ಖರೀದಿ ಮಾಡಬಾರದೆಂಬ ಹಿಂದೂಪರ ಸಂಘಟನೆಗಳ ಕರೆಯನ್ನು ಬಹಿಷ್ಕರಿಸಿ ದಲಿತರು, ರೈತರು, ಬುದ್ದಿಜೀವಿಗಳು, ಸಾಹಿತಿಗಳು ರವಿವಾರ ಮಾಂಸ ಖರೀದಿಸಿದರು.

ಸಾಹಿತಿ ದೇವನೂರು ಮಹದೇವ ದಂಪತಿಗಳು ಮಾಂಸ ಖರೀದಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಿರಿಯ ಸಮಾಜವಾದಿ ಪ.ಮಲ್ಲೇಶ್ ಸಹ ಮುಸ್ಲಿಮ್ ಅಂಗಡಿಯಲ್ಲಿ ಮಾಂಸ ಖರೀದಿಸಿ ಸಂಘಪರಿವಾರದ ವಿರುದ್ಧ ಕಿಡಿಕಾರಿದರು.

ಈ ಸಂದರ್ಭದಲ್ಲಿ ರೈತಸಂಘದ ಬಡಗಲಪುರ ನಾಗೇಂದ್ರ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಆಲಗೂಡು ಶಿವಕುಮಾರ್, ಚೋರನಹಳ್ಳಿ ಶಿವಣ್ಣ, ಶಂಭುಲಿಂಗಸ್ವಾಮಿ ಸೇರಿದಂತೆ ಅನೇಕರು ಹಲಾಲ್ ಕಟ್ ಮಾಂಸ ಖರೀದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News