ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ: ಸಚಿವ ಬಿ.ಸಿ.ನಾಗೇಶ್

Update: 2022-04-05 11:39 GMT

ಬೆಂಗಳೂರು, ಎ.5: ಎರಡೂಮೂರು ಕಿ.ಮೀ ವ್ಯಾಪ್ತಿಯಲ್ಲಿ ಶಾಲೆ ಇರಬೇಕು ಎಂಬ ನಿಯಮ, ಜನಸಂಖ್ಯೆಯಲ್ಲಿ ಇಳಿಕೆ, ಇಂಗ್ಲಿಷ್ ವ್ಯಾಮೋಹದಿಂದಾಗಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಗೆ ಉತ್ತಮ ಪ್ರತಿಕ್ರಿಯೆ ಇದೆ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕನ್ನಡ ಶಾಲೆ ಉಳಿಸಿ; ಕನ್ನಡ ಬೆಳೆಸಿ ಕುರಿತು ಒಂದು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮೂರು ಸಾವಿರ ಮಾದರಿ ಸರಕಾರಿ ಶಾಲೆಗಳನ್ನು ಪ್ರಾರಂಭಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಬಜೆಟ್‍ನಲ್ಲಿ ಮಾದರಿ ಶಾಲೆ ಪ್ರಾರಂಭಿಸುವ ಬಗ್ಗೆ ಘೋಷಣೆ ಮಾಡಿದ್ದು, ಗ್ರಾಪಂ ಮಟ್ಟದಲ್ಲಿ ಈ ಶಾಲೆಗಳನ್ನು ತೆರೆಯಲಾಗುವುದು. ಮಾದರಿ ಶಾಲೆಗಳಲ್ಲಿ ಇಂಗ್ಲಿಷ್ ವಿಷಯವನ್ನು ಕಲಿಸಲಾಗುವುದು. ತರಗತಿಗೊಂದು ಕೊಠಡಿ ಹಾಗೂ ಶಿಕ್ಷಕರು ಕೂಡ ಇರಲಿದ್ದಾರೆ. ಆದರೆ,  ಈ ವರ್ಷ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಪ್ರಾರಂಭಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ವೃತ್ತಿಪರ ಕೋರ್ಸ್‍ಗಳ ಶಿಕ್ಷಣ ಪಡೆಯಲು ಆಗುವುದಿಲ್ಲ ಎಂಬ ಮನಸ್ಥಿತಿ ಇದೆ. ಆದರೆ ರಾಜ್ಯದಲ್ಲಿ 47 ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳಿವೆ. 3,800 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. 562 ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆ ನಡೆಸುತ್ತಿದ್ದೇವೆ ಎಂದರು. 

ದ್ವಿಭಾಷಾ ಪುಸ್ತಕ: ಪಠ್ಯ ಪುಸ್ತಕದ ಮುದ್ರಣ ವೆಚ್ಚ ದುಬಾರಿಯಾದರೂ ಪ್ರಾಥಮಿಕ ಹಂತದಿಂದಲೇ ಕನ್ನಡದ ಜೊತೆಗೆ ಇಂಗ್ಲಿಷ್ ಮಾಡಲಾಗುತ್ತಿದೆ. ಕನ್ನಡ ಶಾಲೆಗಳ ಪಠ್ಯ ಪುಸ್ತಕಗಳಲ್ಲಿ ಇದನ್ನು ಒಳಪಡಿಸಿ ಇಂಗ್ಲಿಷ್ ಪರಿಚಯಿಸಲಾಗುತ್ತಿದೆ. ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸಿ ಎಲ್ಲರೂ ಪ್ರೀತಿಸೋಣ, ಪೋಷಿಸೋಣ ಇದಕ್ಕೆ ಬರುವ ತೊಂದರೆಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು. 

ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಪಾಠ ಮಾಡಿದ ನಂತರ ಆ ಮಕ್ಕಳಿಗೆ ಇಂಗ್ಲಿಷ್ ಬ್ದಗಳ ಪರಿಚಯವನ್ನು ಮಾಡಿದಾಗ ಎರಡೂ ಭಾಷೆಯು ಚೆನ್ನಾಗಿ ತಿಳಿಯುತ್ತದೆ. ಹಾಗೆ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಶಬ್ದಗಳನ್ನು ಕಲಿಸಬೇಕು ಎಂದರು.

ಇದು ನಗರ ಗ್ರಾಮೀಣ ವಿದ್ಯಾರ್ಥಿಗಳಿಗೂ ನೀಡಬೇಕು. ಆದರೆ ಪರೀಕ್ಷೆಯನ್ನು ಯಾವುದಾದರು ಒಂದು ಭಾಷೆಯಲ್ಲಿ ಬರೆಯುವ ಅವಕಾಶ ನೀಡಬೇಕೆಂದು ಸಲಹೆ ಮಾಡಿದ ಅವರು, ಇದಕ್ಕಾಗಿ ಶಿಕ್ಷಕರಿಗೆ ಹೆಚ್ಚಿನ ತರಬೇತಿ ಅಗತ್ಯ. ಆದರೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕೆಂದು ಹೇಳಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News