ಕನಿಷ್ಠ ಸಾಮಾಜಿಕ ಲಜ್ಜೆಯನ್ನೂ, ಸಾರ್ವಜನಿಕವಾಗಿ ಈ ರೀತಿ ಸುಳ್ಳು ಹೇಳಬಾರದು ಎಂದು ತಮಗೆ ಆರೆಸ್ಸೆಸ್‌ ಕಲಿಸಿಲ್ಲವೇ?

Update: 2022-04-06 13:05 GMT

ಬೆಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಚಂದ್ರು ಸಾವು ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆ ಹಾಗೂ ಅದರಿಂದ ಉಲ್ಟಾ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಆರಗ ಜ್ಞಾನೇಂದ್ರರನ್ನು ತೀವ್ರವಾಗಿ ಟೀಕಿಸಿದ್ದಾರೆ. 

ಯುವ ಕಾಂಗ್ರೆಸ್‌ ರಾಷ್ಟ್ರೀಯಾಧ್ಯಕ್ಷ ಶ್ರೀನಿವಾಸ್‌ ಬಿ.ವಿ ಫೇಸ್‌ಬುಕ್‌ ನಲ್ಲಿ ಆರಗ ಜ್ಞಾನೇಂದ್ರ ಹೇಳಿಕೆಯನ್ನು ಖಂಡಿಸಿದ್ದಾರೆ. ಗೃಹಸಚಿವರಾದ ಮೇಲೆ ಆರಗ ಜ್ಞಾನೇಂದ್ರ ಅವರು ನೀಡಿರುವ ಹಲವು ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿರುವ ಶ್ರೀನಿವಾಸ್‌, ಆರಗ ಜ್ಞಾನೇಂದ್ರ ಅವರಿಗೆ ಯಾವ ನಾಗರಿಕ ನಡವಳಿಕೆಗಳಿಲ್ಲ ಎಂದು ಹೇಳಿದ್ದಾರೆ. 

ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್‌, “ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾದಾಗ ನನ್ನ ಜಿಲ್ಲೆಯ ಮರ್ಯಾದೆ ಉಳಿಸಬಹುದು, ಮಲೆನಾಡಿನ ಸಂಸ್ಕೃತಿಗೆ ತಕ್ಕಂತೆ ನಾಗರಿಕ ನಡವಳಿಕೆಗಳಿಂದ ಮಾನವೀಯವಾಗಿ ವರ್ತಿಸಬಹುದು ಎನ್ನುವ ಸಣ್ಣ ನಂಬಿಕೆ ನನಗಿತ್ತು. ಆದರೆ ತಮಗೆ ಯಾವ ನಾಗರಿಕ ನಡವಳಿಕೆಗಳಾಗಲೀ, ಮಾನವೀಯತೆಯ ಸ್ಪರ್ಷವಾಗಲೀ ಇಲ್ಲ. ಮಲೆನಾಡಿನ ಸಂಸ್ಕೃತಿಯಂತೂ ಇಲ್ಲವೇ ಇಲ್ಲ ಎಂದು ಮತ್ತೆ ಮತ್ತೆ ಪ್ರೂವ್ ಮಾಡುತ್ತಿದ್ದಾರೆ.” ಎಂದು ಬರೆದಿದ್ದಾರೆ. 

ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಾಗ ಗೃಹ ಸಚಿವರು ನೀಡಿದ್ದ ವಿವಾದಾತ್ಮಕ ಹೇಳಿಕೆ, ಪೊಲೀಸರ ಕುರಿತು ಹಾಗೂ ಗೃಹ ಇಲಾಖೆಯ ಬಗ್ಗೆ ನೀಡಿದ್ದ ನಿಂದನಾತ್ಮಕ ಹೇಳಿಕೆ ಹಾಗೂ ಬಜರಂಗದಳ ಕಾರ್ಯಕರ್ತ ಹರ್ಷ ಹಾಗೂ ಬೆಂಗಳೂರಿನಲ್ಲಿ ಹತ್ಯೆಗೀಡಾದ ಚಂದ್ರು ಪ್ರಕರಣದವರೆಗೆ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಗಳನ್ನು ಶ್ರೀನಿವಾಸ್‌ ಉಲ್ಲೇಖಿಸಿದ್ದಾರೆ. 

ಅಲ್ಲದೆ, ಇಷ್ಟೊಂದು ಪ್ರಮಾಣದಲ್ಲಿ ಸುಳ್ಳು ಹೇಳಲು ಆರ್‌ಎಸ್‌ಎಸ್‌ ಕಲಿಸಿದೆಯೇ ಎಂದು ಪ್ರಶ್ನಿಸಿದ ಶ್ರೀನಿವಾಸ್, ಕನಿಷ್ಠ ಸಾಮಾಜಿಕ ಲಜ್ಜೆಯನ್ನೂ, ಸಾರ್ವಜನಿಕವಾಗಿ ಈ ಪ್ರಮಾಣದ ಸುಳ್ಳು ಹೇಳಬಾರದು ಎನ್ನುವ ಸಾಮಾನ್ಯ ಜ್ಞಾನವನ್ನೂ  RSS ಕಲಿಸಿ ಕೊಡಲಿಲ್ಲವೇ  ಎಂದು ಪ್ರಶ್ನಿಸಿದ್ದಾರೆ.

ಬಿ.ವಿ ಶ್ರೀನಿವಾಸ್‌ ರವರ ಬರಹದ ಪೂರ್ಣ ಪಠ್ಯ ಇಂತಿದೆ.

Accidental Home Minister

ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾದಾಗ ನನ್ನ ಜಿಲ್ಲೆಯ ಮರ್ಯಾದೆ ಉಳಿಸಬಹುದು, ಮಲೆನಾಡಿನ ಸಂಸ್ಕೃತಿಗೆ ತಕ್ಕಂತೆ ನಾಗರಿಕ ನಡವಳಿಕೆಗಳಿಂದ ಮಾನವೀಯವಾಗಿ ವರ್ತಿಸಬಹುದು ಎನ್ನುವ ಸಣ್ಣ ನಂಬಿಕೆ ನನಗಿತ್ತು. ಆದರೆ ತಮಗೆ ಯಾವ ನಾಗರಿಕ ನಡವಳಿಕೆಗಳಾಗಲೀ, ಮಾನವೀಯತೆಯ ಸ್ಪರ್ಷವಾಗಲೀ ಇಲ್ಲ. ಮಲೆನಾಡಿನ ಸಂಸ್ಕೃತಿಯಂತೂ ಇಲ್ಲವೇ ಇಲ್ಲ ಎಂದು ಮತ್ತೆ ಮತ್ತೆ ಪ್ರೂವ್ ಮಾಡುತ್ತಿದ್ದಾರೆ.

ಘಟನೆ 1) ಮೈಸೂರು ಗ್ಯಾಂಗ್ ರೇಪ್. 

ಸಚಿವರ ಮಾತು: ಕಾಂಗ್ರೆಸ್ಸಿಗರೇ ನನ್ನನ್ನು ಗ್ಯಾಂಗ್ ರೇಪ್ ಮಾಡುತ್ತಿದ್ದಾರೆ. 
* ಅತ್ಯಾಚಾರಕ್ಕೆ ಒಳಗಾದ ಯುವತಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಬೇಕಿತ್ತು. 

ಘಟನೆ 2) ಗೃಹ ಸಚಿವರಾಗಿದ್ದಕ್ಕೆ ಶಿವಮೊಗ್ಗದಲ್ಲಿ ಸನ್ಮಾನ ಸಮಾರಂಭ.

ಸಚಿವರ ಮಾತು: ಗೃಹ ಇಲಾಖೆ ಅಂದ್ರೆ ದೊಡ್ಡ ಇಲಾಖೆ ಅಂದ್ಕೊಂಡಿದ್ದೆ. ಆದ್ರೆ ಪೊಲೀಸರು ಸರಿಯಾಗಿ ನಿದ್ದೆ ಮಾಡೋಕೂ ಬಿಡೋದಿಲ್ಲ. 

ಘಟನೆ 3): ಚಿಕ್ಕಮಗಳೂರು SP ಜತೆ ಮಾತನಾಡುತ್ತಾ ? 
ಸಚಿವರ ಮಾತು: ಪೊಲೀಸರು ಎಂಜಲು ತಿನ್ನುತ್ತಾ ನಾಯಿಯಂತೆ ಬಿದ್ದಿರ್ತಾರೆ. 
(ತಮ್ಮದೇ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಎಂಜಲು ತಿನ್ನುವ ನಾಯಿಗಳು ಎಂದು ಕರೆದ ಸ್ವತಂತ್ರ ಭಾರತದ ಮೊದಲ ಗೃಹ ಮಂತ್ರಿ). 

ಘಟನೆ 4): ಶಿವಮೊಗ್ಗ ಹರ್ಷ ಪ್ರಕರಣ- ಕೊಲೆಯಾದ ಹರ್ಷನ ಮೇಲೂ ಕ್ರಿಮಿನಲ್ ಪ್ರಕರಣಗಳಿದ್ದವು ಎಂದು ಮಾಧ್ಯಮಗಳಿಗೆ ಹೇಳಿಕೆ. ಬಳಿಕ ವಿಧಾನಸಭೆಯಲ್ಲಿ ತಾನು ಹಾಗೆ ಹೇಳಿಯೇ ಇಲ್ಲ ಎಂದು ಸುಳ್ಳು ಹೇಳಿದರು. 

ಘಟನೆ 5) : ಬೆಂಗಳೂರು ಯುವಕ ಚಂದ್ರು ಕೊಲೆ ಪ್ರಕರಣ. ಉರ್ದು ಭಾಷೆ ಮಾತನಾಡಲಿಲ್ಲವೆಂದು ಚಂದ್ರುನನ್ನು ಕೊಲೆ ಮಾಡಲಾಗಿದೆ. ( ಮೊದಲ ಹೇಳಿಕೆ)

* ಇಲ್ಲ ಇಲ್ಲ. ನನಗೆ ಸರಿಯಾದ ಮಾಹಿತಿ ಇರಲಿಲ್ಲ. ಚಂದ್ರು ಕೊಲೆ ಉರ್ದು ಕಾರಣಕ್ಕೆ, ಭಾಷೆ ಕಾರಣಕ್ಕೆ ಆಗಿರುವುದಲ್ಲ. ಆಕ್ಸಿಡೆಂಟ್ ಜಗಳದಲ್ಲಿ ಕೊಲೆ ಆಗಿದ್ದು. ನನ್ನ ಮೊದಲಿನ ಹೇಳಿಕೆಗೆ ಕ್ಷಮೆ ಕೇಳುತ್ತೇನೆ. 

ಸನ್ಮಾನ್ಯ ಗೃಹ ಸಚಿವರೇ ತಾನು RSS ನಿಂದಲೇ ಎಲ್ಲವನ್ನೂ ಕಲಿತಿದ್ದು, RSS ನಿಂದಲೇ ನಾನು ಬೆಳೆದದ್ದು ಎನ್ನುವ ನೀವು RSS ನಿಂದ ಇದನ್ನೇ ಕಲಿತಿದ್ದಾ ? ಕನಿಷ್ಠ ಸಾಮಾಜಿಕ ಲಜ್ಜೆಯನ್ನೂ, ಸಾರ್ವಜನಿಕವಾಗಿ ಈ ಪ್ರಮಾಣದ ಸುಳ್ಳು ಹೇಳಬಾರದು ಎನ್ನುವ ಕಾಮನ್ ಸೆನ್ಸ್ ಅನ್ನೂ‌ RSS ಕಲಿಸಿ ಕೊಡಲಿಲ್ಲವೇ ನಿಮಗೆ ? 
Shame..Shame...ಪಪ್ಪಿ Shame.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News