ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ

Update: 2022-04-07 13:57 GMT

ಬೆಂಗಳೂರು, ಎ.7: 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಎ.22ರಿಂದ ಮೇ 18 ರವರೆಗೆ ಬೆಳಗ್ಗೆ 10.15ರಿಂದ 1.30ರವರೆಗೆ ನಡೆಯಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆಯು ಗುರುವಾರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವೇಳಾಪಟ್ಟಿಯನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದ್ದು, ಈ ಹಿಂದೆ ಪ್ರಕಟಿಸಿರುವ ಯಾವುದೇ ವೇಳಾಪಟಿಯನ್ನು ಅನುಸರಿಸದಂತೆ ಪ್ರಕಟನೆಯಲ್ಲಿ ತಿಳಿಸಿದೆ.

ಎ.22 ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಎ.23 ರಂದು ಗಣಿತ ಹಾಗೂ ಶಿಕ್ಷಣ ಶಾಸ್ತ್ರ, ಎ.25 ರಂದು ಅರ್ಥಶಾಸ್ತ್ರ, ಎ.26 ರಂದು ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಮೂಲ ಗಣಿತ ಪರೀಕ್ಷೆ ನಡೆಯಲಿದೆ. ಎ.27 ರಂದು ತಮಿಳು, ತೆಲುಗು, ಮಳಯಾಳಂ, ಮರಾಠಿ, ಉರ್ದು, ಸಂಸ್ಕೃತ, ಪ್ರೆಂಚ್ ಭಾಷಾ ಪರೀಕ್ಷೆಗಳು ನಡೆಯುತ್ತವೆ.

ಎ.28 ರಂದು ಕನ್ನಡ ಹಾಗೂ ಅರೇಬಿಕ್ ಭಾಷೆ ಪರೀಕ್ಷೆ, ಮೇ 4 ರಂದು ಭೂಗೋಳಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ, ಮೇ 5ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್ ಮತ್ತು ಮೇ 6 ರಂದು ಇಂಗ್ಲಿಷ್ ಭಾಷೆ ಪರೀಕ್ಷೆ ನಡೆಯಲಿದೆ.

ಮೇ 10 ರಂದು ಇತಿಹಾಸ, ಭೌತಶಾಸ್ತ್ರ, ಮೇ 12 ರಂದು ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಪರೀಕ್ಷೆ, ಮೇ 14 ರಂದು ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆಗಳನ್ನು ನಡೆಸಲಾಗುವುದು. 

ಮೇ 17 ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹವಿಜ್ಞಾನ ಪರೀಕ್ಷೆ ಹಾಗೂ ಮೇ 18 ರಂದು ಹಿಂದಿ ಭಾಷೆ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News